Recent Posts

Saturday, November 16, 2024
ಸುದ್ದಿ

ಲೋಕೋಪಯೋಗಿ ಇಲಾಖೆಯಲ್ಲಿ 870 ಉದ್ಯೋಗ: ಜೂನ್‌ 22ರಿಂದ 24ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆ

ಬೆಂಗಳೂರು: ಜೂನ್‌ 22 ರಿಂದ ಜೂನ್‌ 24 ರವರೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ ಕಿರಿಯ ಇಂಜಿನಿಯರ್‌, ಸಹಾಯಕ ಇಂಜಿನಿಯರ್‌ ಗ್ರೇಡ್‌-1 ಮತ್ತು ಸಹಾಯಕ ಇಂಜಿನಿಯರ್‌ ಗ್ರೇಡ್‌ 1/ಕಿರಿಯ ಇಂಜಿನಿಯರ್‌ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.​

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ 570 ಗ್ರೂಪ್‌ ಬಿ ದರ್ಜೆಯ ಸಹಾಯಕ ಎಂಜಿನಿಯರ್‌ (ಗ್ರೇಡ್‌-1) ಹುದ್ದೆ ಹಾಗೂ ಗ್ರೂಪ್‌ ಸಿ ದರ್ಜೆಯ 300 ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಜೂನ್‌ 22 ರಿಂದ ಜೂನ್‌ 24 ರವರೆಗೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಜೂನ್‌ 10 ರಿಂದ ಜೂನ್‌ 12ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿತ್ತು.

ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಅಥವಾ ಕಿರಿಯ ಇಂಜಿನಿಯರ್‌
ಜೂನ್‌ 24, 2019 ರಂದು ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಅಥವಾ ಕಿರಿಯ ಇಂಜಿನಿಯರ್‌ ಹುದ್ದೆಗೆ ಪರೀಕ್ಷೆ ನಡೆಯಲಿದೆ. ಕನ್ನಡ ಭಾಷಾ ಪರೀಕ್ಷೆ (ವಿವರಾಣತ್ಮಕ ಲಿಖಿತ ಪರೀಕ್ಷೆ)ಯು ಬೆಳಗ್ಗೆ 10.30ರಿಂದ ಮಧ್ಯಾನ್ಹ 12.30ರ ವರೆಗೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಕಿರಿಯ ಇಂಜಿನಿಯರ್‌
ಜೂನ್‌ 22, 2019 ರಂದು ಕಿರಿಯ ಇಂಜಿನಿಯರ್‌ ಹುದ್ದೆಗೆ ಪರೀಕ್ಷೆ ನಡೆಯಲಿದೆ. 2 ಪೇಪರ್‌ಗಳಿದ್ದು, 1 ಸಾಮಾನ್ಯ ಜ್ಞಾನ, 2 ತಾಂತ್ರಿಕ ಪತ್ರಿಕೆ ಇರಲಿದೆ. ಸಾಮಾನ್ಯ ಜ್ಞಾನ ಪೇಪರ್‌ ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ. ತಾಂತ್ರಿಕ ಪತ್ರಿಕೆ ಪರೀಕ್ಷೆಯು ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ.ಸಹಾಯಕ ಇಂಜಿನಿಯರ್‌ ಗ್ರೇಡ್‌ – 1
ಜೂನ್‌ 23, 2019 ರಂದು ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಪರೀಕ್ಷೆ ನಡೆಯಲಿದ್ದು, ಸಾಮಾನ್ಯ ಜ್ಞಾನ ಮತ್ತು ತಾಂತ್ರಿಕ ಪತ್ರಿಕೆ ಎಂಬ 2 ಪರೀಕ್ಷೆಗಳು ನಡೆಯಲಿವೆ. ಸಾಮಾನ್ಯ ಜ್ಞಾನ ಪೇಪರ್‌ ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ. ತಾಂತ್ರಿಕ ಪತ್ರಿಕೆ ಪರೀಕ್ಷೆಯು ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ.