Wednesday, January 22, 2025
ಸುದ್ದಿ

ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದೆ ಎಂದು ಮುಸ್ಲಿಮರು ಗಾಬರಿಯಾಗಬೇಡಿ: ಓವೈಸಿ – ಕಹಳೆ ನ್ಯೂಸ್

ಹೈದರಾಬಾದ್‌: ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದೆ ಎಂದು ರಾಷ್ಟ್ರದ ಮುಸ್ಲಿಮರು ಗಾಬರಿಯಾಗಬೇಕಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನಕ್ಕೆ ಹೋಗಬಹುದು ಎಂದಾದರೆ ಮುಸ್ಲಿಮರು ಮಸೀದಿಗೆ ಹೆಮ್ಮೆಯಿಂದ ಭೇಟಿ ನೀಡಬಹುದು ಎಂದು ಓವೈಸಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಮೆಕ್ಕಾ ಮಸೀದಿಯಲ್ಲಿ ಮಾತನಾಡಿದ ಓವೈಸಿ, ನಮ್ಮ ಧರ್ಮವನ್ನು ಪಾಲನೆ ಮಾಡಲು ಭಾರತೀಯ ಕಾನೂನು, ಸಂವಿಧಾನ ಅಧಿಕಾರ ನೀಡಿದೆ. ಬಿಜೆಪಿ ಮರಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದಕ್ಕೆ ಮುಸ್ಲಿಮರು ಹೆದರಬೇಕಾಗಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನಕ್ಕೆ ಹೋಗಬಹುದು ಎಂದಾದರೆ ಮುಸ್ಲಿಮರು ಮಸೀದಿಗೆ ಹೆಮ್ಮೆಯಿಂದ ಭೇಟಿ ನೀಡಬಹುದು ಎಂದು ಓವೈಸಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್‌ ದಾಳಿಯನ್ನು ವಿರೋಧಿಸಿ ಹೇಳಿಕೆ ನೀಡಿದ ಓವೈಸಿ, ಇಂತಹ ನಡೆಯನ್ನು ಇಸ್ಲಾಮ್‌ ಸ್ವೀಕರಿಸುವುದಿಲ್ಲ. ಉಗ್ರ ಕೃತ್ಯ ನಡೆಸುತ್ತಿರುವವರು ಇಸ್ಲಾಮ್‌ ಹಿಂಬಾಲಕರಲ್ಲ. ಅವರು ದೆವ್ವದ ಹಿಂಬಾಲಕರು ಎಂದು ಓವೈಸಿ ಹೇಳಿದ್ದಾರೆ.

ಏಪ್ರಿಲ್‌ 21ರಂದು ಈಸ್ಟರ್‌ ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಬ್ಲಾಸ್ಟ್‌ನಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.