Wednesday, January 22, 2025
ಸುದ್ದಿ

4 ತಿಂಗಳಿಂದ ಬಾಗಿಲು ತೆರೆಯದ ರಾಜಧಾನಿ ಜ್ಯುವೆಲರ್ಸ್..! : ಹಣದೊಂದಿಗೆ ಪರಾರಿಯಾಗಿದ್ದಾರಾ..? – ಕಹಳೆ ನ್ಯೂಸ್

ನಾಲ್ಕು ತಿಂಗಳುಗಳಿಂದ ಬಾಗಿಲು ತೆರೆಯದ ಕಡಬದ ರಾಜಧಾನಿ ಜ್ಯುವೆಲರ್ಸ್ ಬಡವರ ಹಣದೊಂದಿಗೆ ಪರಾರಿಯಾಗಿದ್ದಾರಾ..! ಹೌದು ಇಂತಹದೊಂದು ಅನುಮಾನ ಕಡಬದ ರಾಜಧಾನಿ ಜ್ಯುವೆಲರ್ಸ್ ನಲ್ಲಿ ಹಣ ಹೂಡಿಕೆ ಮಾಡಿದ ಗ್ರಾಹಕರನ್ನು ಕಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿನ್ನಾಭರಣ ವ್ಯಾಪಾರದಲ್ಲಿ ಹೆಸರುಗಳಿಸಿ ಕಡಬದಲ್ಲಿ ಕಾರ್ಯಾಚರಿಸುತ್ತಿದ್ದ ರಾಜಧಾನಿ ಜ್ಯುವೆಲರ್ಸ್‍ ನ ಕಡಬ ಶಾಖೆ ಕಳೆದ ನಾಲ್ಕು ತಿಂಗಳಿಂದ ಮುಚ್ಚಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಈ ಚಿನ್ನಾಭರಣ ಮಳಿಗೆಯಲ್ಲಿ ವಿವಿಧ ಸ್ಕೀಮ್‍ಗಳಿಗೆ ಹಣ ಜಮೆ ಮಾಡಿದ ಕಡಬ ಪರಿಸರದ ಜನರು ಆತಂಕದಲ್ಲಿದ್ದು, ಬಡವರ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂಬ ಸುದ್ದಿ ಕಡಬದಲ್ಲಿ ಹಬ್ಬಿದೆ.

ಈ ಸುದ್ದಿ ತಿಳಿದು ಯೋಜನೆಯೊಂದರಲ್ಲಿ ಹಣ ಹೂಡಿಕೆ ಮಾಡಿದ ಕಡಬ ತಾಲೂಕಿನ ಪೇರಡ್ಕದ ಆಲೀಸ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, 2017 ಎಪ್ರಿಲ್ ನಿಂದ ಸ್ಕೀಂಗೆ ಸೇರಿಕೊಂಡಿದ್ದು 2019 ಜನವರಿವರೆಗೆ ಹೂಡಿಕೆ ಮಾಡಿದ್ದೇನೆ. ಬಳಿಕ ಯಾವುದೇ ಮಾಹಿತಿ ನೀಡದೆ ರಾಜಧಾನಿ ಜುವೆಲರ್ಸ್‍ ನವರು ಅಂಗಡಿ ಮುಚ್ಚಿದ್ದು, ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಗ್ರಾಮೀಣ ಭಾಗದ ಹಲವು ಜನರು ವಿವಿಧ ಸ್ಕೀಂಗಳಲ್ಲಿ ಸೇರಿಕೊಂಡಿರುವ ಬಗ್ಗೆ ಸುದ್ದಿ ಕೇಳಿ ಬರುತ್ತಿದ್ದು, ಈ ಬಗ್ಗೆ ಮಾಹಿತಿಗಾಗಿ ರಾಜಧಾನಿ ಜುವೆಲರ್ಸ್ ನ ಕೇಂದ್ರ ಕಚೇರಿ ಮತ್ತು ಕಡಬ ಶಾಖೆಯ ಮುಖ್ಯಸ್ಥರ ದೂರವಾಣಿ ಸಂಪರ್ಕಿಸಲು ಪ್ರಯತ್ನಿಸಿದರೆ ಪೋನ್ ಜಾಲ್ತಿಯಲ್ಲಿಲ್ಲ ಎಂಬ ಮರು ಸಂದೇಶ ಬರುತ್ತಿದೆ.