Sunday, January 19, 2025
ಅಂಕಣ

ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 40

ಮೂಡಣದ ಕಡಲಿನಲಿ
ಮೂಡುತಿಹ ಬಾಲರವಿ
ಏರಿದನು ಬೆಳ್ಳಿರಥ
ಕಾಂತಿಯುತ ಮನುಮಥ

ಚಿಲಿಪಿಲಿಯ ಹಕ್ಕಿಗಳ
ನಲಿಪ ಗಾನಮೇಳಗಳ
ನಂದಗೋಕುಲದಸಿರಿ
ಜೀವಜಾಲಕೆದೆ ಐಸಿರಿ

ಜಾಹೀರಾತು
ಜಾಹೀರಾತು
ಜಾಹೀರಾತು

ಹೋಲಿಕೆಯು ಬೇಕೇನು
ತೋರಿಸದೆ ಆ ಬಾನು
ಹೋಲಿಕೆಯು ನಿನಗಿಲ್ಲ
ಕಾಣುತಿದೆ ಜಗಕೆಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು

ಹೇ ಸಿಂದು ನೀನು
ತಾ ಬಂದು ನಾನು
ಭಗವಂತ ನೀನು
ನಿನ ಭಕುತ ನಾನು

ಬೆಣ್ಣೆ ಮುದ್ದೆಯ ತೆರದಿ
ಕಣ್ಣ ರೆಪ್ಪೆಯ ಮುದದಿ
ಮನದ ಮಂಟಪ ತೇರು
ಹೃದಯ ದೇಗುಲ ಏರು

ಜೀವಜಾಲದ ನಡುವೆ
ದೇವ ಮಾನವ ಗುಣವೆ
ಮಂಗಳನ ಅಂಗಳದಿ
ಬೆಳಸಿ ಬಾ ಮಂಗಳದಿ

ಜಗವೆಲ್ಲ ಬೆಳಗು
ಜಯಭೇರಿ ಮೊಳಗು
ಮಂದಹಾಸದ ನಗವು
ನಾ ಎಳೆಯ ಮಗುವು

Leave a Response