Thursday, January 23, 2025
ಸುದ್ದಿ

ಶಾಲೆ ಮುಗಿಸಿ ವಾಪಸ್ ಮನೆಗೆ ಬಾರದೆ ಮೂವರು ಮಕ್ಕಳು ನಾಪತ್ತೆ – ಕಹಳೆ ನ್ಯೂಸ್

ಮೈಸೂರು:  ಶಾಲೆ ಮುಗಿಸಿ ವಾಪಸ್ ಮನೆಗೆ ಬರುವ ವೇಳೆ ಮನೆಗೆ ಬಾರದೆ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ  ಮೈಸೂರಿನ ಪಿರಿಯಾಪಟ್ಟಣದ ಈಚೂರ್ ಬಸ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಮಕ್ಕಳಿಗಾಗಿ ಪೋಷಕರ ಹುಟುಕಾಟ

ಜಾಹೀರಾತು
ಜಾಹೀರಾತು
ಜಾಹೀರಾತು

ಮೊನ್ನೆ ಸಂಜೆ ಶಾಲೆ ಮುಗಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಕ್ಕಳು. ಬಸ್ ನಿಲ್ದಾಣದಲ್ಲಿ ಆಟವಾಡುತ್ತಿದ್ದಂತೆ ಕೆಲವೊತ್ತಿನ ನಂತರ ನಾಪತ್ತೆಯಾಗಿದ್ದು, ನಿನ್ನೆಯಿಂದ ಸಂಬಂಧಿಕರು ಹಾಗೂ ಪೋಷಕರು ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಬೆಳಗ್ಗೆಯಾದರು ಮೂವರು ಮಕ್ಕಳು ಮನೆಗೆ ಬಂದಿಲ್ಲ,  ಆದಿತ್ಯ ಅರಸ್ (13) ಪ್ರದೀಪ(11) ಪವನ್(10) ನಾಪತ್ತೆಯಾದ ಮಕ್ಕಳು ಇನ್ನೂ ಆತಂಕಗೊಂಡ ಪೋಷಕರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಇಂದು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಪೋಷಕರು. ಮಕ್ಕಳ ಪತ್ತೆಗಾಗಿ ಮನವಿ ಮಾಡಿದ್ದಾರೆ.