ಹಾವೇರಿ: ನಾನು ಕಾಂಗ್ರೆಸ್ ಶಾಸಕ. ಆಪರೇಷನ್ ಕಮಲದ ಬಗ್ಗೆ ಬಿಜೆಪಿ ಅವರನ್ನು ಕೇಳಬೇಕು ಎಂದು ಹೀರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ನಿವಾಸದಲ್ಲಿಂದು ಮಾತನಾಡಿದ ಅವರು, ಸಮಾಧಾನ ಆಗೋ ವರೆಗೂ ಅಸಮಾಧಾನ ಇದ್ದೇ ಇರುತ್ತೆ. ಅಸಮಾಧಾನಕ್ಕೆ ಯಾವಾಗ ತೆರೆ ಬೀಳುತ್ತೆ ಅನ್ನೋದಕ್ಕೆ ವೇಟ್ ಆಂಡ್ ಸೀ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಈ ಬಾರಿ ಸಚಿವ ಸ್ಥಾನದ ಭರವಸೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ನನಗೆ ಭರವಸೆ ಕೊಟ್ಟಿದ್ದಾರೆ ಎಂದರು.
ಸದ್ಯ ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ. ಐದು ವರ್ಷ ಸರಕಾರ ಪೂರೈಸುತ್ತೆ ಅನ್ನೋ ಭರವಸೆ ನಮಗೆ ಇದೆ ಎಂದು ಹೀರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಅವರು ಮಾತನಾಡಿದ್ದಾರೆ.
ಆಪರೇಷನ್ ಕಮಲದ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಅವರ ಹೆಸರು ಕೇಳಿಬಂದಿತ್ತು ಜೊತೆಗೆ ಅವರೇ ಹೇಳಿರುವಂತೆ ಪಕ್ಷದಲ್ಲಿ ಅವರಿಗೆ ಅಸಮಾಧಾನವಿದೆ ಅದಕ್ಕೆ ಕಾರಣವನ್ನು ಕೊಟ್ಟಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದ್ರೆ, ಅದು ನನಗೆ ದೊರೆತಿಲ್ಲ ಹೀಗಾಗಿ ಅಸಮಾಧಾನವಿದೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ.