Friday, January 24, 2025
ಸುದ್ದಿ

ಬೆಂಗಳೂರಿನಲ್ಲಿ ಹೈಟೆಕ್ಷನ್ ತಂತಿಗೆ ಮತ್ತೊಂದು‌ ಬಲಿ; ಕಳೆದ ನಾಲ್ಕು ತಿಂಗಳಲ್ಲಿ ಇದು ಏಳನೇ ಸಾವು! – ಕಹಳೆ ನ್ಯೂಸ್

ಬೆಂಗಳೂರು ; ಇತ್ತೀಚೆಗೆ ಬೆಂಗಳೂರಿನಲ್ಲಿ ಹೈಟೆಕ್ಷನ್ ವಿದ್ಯುತ್​ ತಂತಿ ಸ್ಪರ್ಶಿಸಿ ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಫೆಬ್ರವರಿಯಲ್ಲಿ ಬಾಣಸವಾಡಿಯ 7 ವರ್ಷದ ಬಾಲಕ ಉದಯ್ ಮೃತಪಟ್ಟಿದ್ದರೆ. ಮೇ ತಿಂಗಳಲ್ಲಿ ಮತ್ತಿಕೆರೆಯ 14 ವರ್ಷದ ಬಾಲಕ ಲಿಖಿಲ್ ಶೇ.40 ರಷ್ಟು ಸುಟ್ಟಗಾಯಕ್ಕೆ ಒಳಗಾಗಿದ್ದ. ಈ ಘನನೆಗಳು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿದ್ಯುತ್​ ತಂತಿಗಳಿಗೆ ಮತ್ತೊಂದು ಬಲಿ ಬಿದ್ದಿದೆ.
ಮತ್ತಿಕೆರೆಯ ನಿವಾಸಿ ಕಟ್ಟಡ ಕಾರ್ಮಿಕ ಸತೀಶ್ (23) ಮೃತಪಟ್ಟ ದುರ್ದೈವಿ. ಈತ ಮಂಜುನಾಥ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿನ ಕೆಲಸ ಮಾಡುತ್ತಿದ್ದ. ಮೇ.27 ರಂದು ಮೊದಲನೇ ಮಹಡಿಯಲ್ಲಿ ಕಾಂಕ್ರೀಟ್ ಹಾಕುತ್ತಿದ್ದ ವೇಳೆ ಈತನಿಗೆ ವಿದ್ಯುತ್​ ಸ್ಪರ್ಶಿಸಿ ಶೇ.80 ರಷ್ಟು ಸುಟ್ಟಗಾಯಗಳಾಗಿವೆ. ಕೂಡಲೇ ಗಾಯಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ  ಇಂದು ಆತ ಮೃತಪಟ್ಟಿದ್ದಾನೆ.
ವಿದ್ಯುತ್​ ತಂತಿ ಸ್ಪರ್ಶಿಸಿ ಬಾಲಕ ಸಾವು; ಮುಗಿಲು ಮುಟ್ಟಿದ ಪಾಲಕರ ಆಕ್ರಂದನ

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುತ್ ಅವಘಡಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು