Recent Posts

Sunday, January 19, 2025
ಸುದ್ದಿ

ಮೈಸೂರಿಲ್ಲೂ ಲವ್‌ ಜಿಹಾದ್‌ ?: ಸುಂದರ ಯುವತಿ ನಾಪತ್ತೆ – ಕಹಳೆ ನ್ಯೂಸ್

 

ಶಿವಮೊಗ್ಗ: ಜಿಲ್ಲೆಯ ಜಯನಗರ ಠಾಣೆಯಲ್ಲಿ ಲವ್‌ ಜಿಹಾದ್‌ ಪ್ರಕರಣವೊಂದು ದಾಖಲಾಗಿದ್ದು, ಮುಸ್ಲಿಂ ಯುವಕನೊಬ್ಬನನ್ನು ವಿವಾಹವಾಗಿ ನಾಪತ್ತೆಯಾಗಿರುವ ಇಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬಳ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನುಷಾ ಹೆಗಡೆ ಎಂಬ ಬಿಇ ವ್ಯಾಸಂಗ ಮಾಡುತ್ತಿದ್ದಾಕೆ ಜಾವೀದ್‌ ಖಾನ್‌ ಎಂಬಾತನೊಂದಿಗೆ ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಮೊಗ್ಗ ಮೂಲದ ಸಂಗೀತ ವಿದ್ವಾನ್‌ ಓರ್ವರ ಪುತ್ರಿ ಅನುಷಾ ಮೈಸೂರಿನಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ ವೇಳೆ ಜಾವೀದ್‌ನ ಬಲೆಗೆ ಬಿದ್ದಿದ್ದಳು .

ಅನುಷಾ ಪೋಷಕರ ವಿರೋಧದ ನಡೆವೆಯೂ ಜಾವೀದ್‌ನನ್ನು ವಿವಾಹವಾಗಿದ್ದು, ಆ ಬಳಿಕ ಕೆಲ ದಿನಗಳ ಬಳಿಕ ಮನೆಗೆ ವಾಪಾಸಾಗಿ ತಾನು ಅನುಭವಿಸುತ್ತಿದ್ದ ಚಿತ್ರ ಹಿಂಸೆ ಬಗ್ಗೆ ಹೇಳಿಕೊಂಡಿದ್ದಾಳೆ. ನನ್ನನ್ನು ಜಾವೀದ್‌ ಗೃಹ ಬಂಧನದಲ್ಲಿರಿಸಿ ಹಿಂಸಿಸುತ್ತಿದ್ದಾನೆ. ಆತನ 2 ಹೆಂಡತಿಯ ಮಗುವಿನ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದಾನೆ ಎಂದು ನೋವು ತೋಡಿಕೊಂಡಿರುವುದಾಗಿ ಪೋಷಕರು ಪೊಲೀಸರ ಬಳಿ ಹೇಳಿದ್ದಾರೆ.

ಇದೀಗ ಆಕೆ ಮತ್ತೆ ಜಾವೀದ್‌ನೊಂದಿಗೆ ತೆರಳಿದ್ದು ಆತ ಆಕೆಯ ಬ್ರೈನ್‌ ವಾಷ್‌ ಮಾಡಿದ್ದಾನೆ. ಈಗಾಗಲೇ ಆತನಿಗೆ 2 ಮದುವೆಯಾಗಿದೆ ಎಂದು ಪೋಷಕರು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಮಗಳ ಅಂತಧರ್ಮೀಯ ವಿವಾದದಿಂದ ತೀವ್ರವಾಗಿ ನೊಂದಿದ್ದ ಪೋಷಕರು ಇದೀಗ ಮಗಳು ನಾಪತ್ತೆಯಾಗಿರುವುದರಿಂದ ಇನ್ನಷ್ಟು ಕಂಗಾಲಾಗಿದ್ದಾರೆ.

ಅನುಷಾ ಪೋಷಕರು 12 ವರ್ಷದ ಹಿಂದೆ ಮೈಸೂರಿಗೆ ಬಂದು ನೆಲೆಸಿದ್ದರು.

Leave a Response