Saturday, January 25, 2025
ರಾಜಕೀಯಸುದ್ದಿ

‘ಜೆಡಿಎಸ್ ಪಕ್ಷವನ್ನ ಕಾಂಗ್ರೆಸ್ ಪಕ್ಷಕ್ಕೆ ಮಾರಾಟ ಮಾಡಿದ್ದಾರೆ’ – ಕಹಳೆ ನ್ಯೂಸ್

ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ಸನ್ನು ಮಾರಾಟ ಮಾಡಿದ್ದಾರೆ ಎಂದು ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ವಿರುದ್ಧ ಮಂಜುನಾಥ್ ಗೌಡ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಜೊತೆ ಸೇರಿಕೊಂಡು ವೆಂಕಟಶಿವಾರೆಡ್ಡಿ ಜೆಡಿಎಸ್ ಮಾರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಪುರಸಭೆ ಸ್ಥಾನಗಳ ಸೋಲಿಗೆ ವೆಂಕಟಶಿವಾರೆಡ್ಡಿ ಕಾರಣವೆಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಲೂರು ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಪಕ್ಷದ ಮಂಜುನಾಥ್ ಗೌಡ ಕೈಜೋಡಿಸಿದ್ದು, ವೆಂಕಟಶಿವಾರೆಡ್ಡಿ ಪಕ್ಷ ಬೆಳೆಸಲು ಯಾವುದೇ ಕೆಲಸ ಮಾಡ್ತಿಲ್ಲವೆಂದು ಮಂಜುನಾಥ್ ಗೌಡ ಆರೋಪ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು