ಪುತ್ತೂರಿನಲ್ಲಿ ಹಾಡುಹಗಲೆ ಪತ್ರಿಕಾ ವಿತರಕನಿಂದ ಚೂರಿ ಇರಿತ ( ಘಟನೆಯ ಹಿನ್ನಲೆ ಹಾಗೂ ಸಂಪೂರ್ಣ ಮಾಹಿತಿ ) – ಕಹಳೆ ನ್ಯೂಸ್
ಪುತ್ತೂರು : ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಜನತಾ ಕಾಲೋನಿ ನಿವಾಸಿ ಶರತ್ ರೈ ಮತ್ತು ಆರೋಪಿ ವಿನೋದ್‌ರವರುಗಳಿಗೆ ಸುಮಾರು 7 ವರ್ಷಗಳ ಹಿಂದೆ ಕೃಷ್ಣ ನಗರ ಎಂಬಲ್ಲಿ ವೈಯಕ್ತಿಕ ವಿಚಾರವಾಗಿ ಹೊಡೆದಾಟ ನಡೆದಿದ್ದು , ಈ ವಿಚಾರದಲ್ಲಿ ದ್ವೇಷಗೊಂಡು ದ್ವೇಷವನ್ನು ಸಾಧಿಸುತ್ತಾ ಶರತ್ ರೈ ಹೊಡೆದಿರುವುದರಿಂದ ನನ್ನ ದೃಷ್ಟಿ ಹೋಗಿದೆ ಅವನನ್ನು ಕೂಡಾ ದುಡಿದು ತಿನ್ನದ ಹಾಗೇ ಮಾಡುತ್ತೇನೆ ಎಂದು ಹೇಳಿಕೊಂಡು ಶರತ್ ರೈಯನ್ನು ಹುಡುಕಾಡುತ್ತಾ ಇದ್ದ ವಿನೋದನು ಈ ದಿನ ದಿನಾಂಕ 01.06.2019 ರಂದು ಮಧ್ಯಾಹ್ನ ಸಮಯ ಸುಮಾರು 1.30 ಗಂಟೆಗೆ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಕೊಂಬೆಟ್ಟು ಬಂಟರ ಭವನ ಕ್ರಾಸ್ ಬಳಿ ಮೋಟಾರು ಸೈಕಲ್‌ನಲ್ಲಿ ಬರುತ್ತಿದ್ದ ಶರತ್ ರೈಯನ್ನು ತನ್ನ ಬಾಬ್ತು ಹೊಂಡಾ ಆಕ್ಟೀವದಲ್ಲಿ ಹಿಂಬಾಲಿಸಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಸ್ಕೂಟರ್‌ನಿಂದ ಇಳಿದು ಕತ್ತಿಯೊಂದನ್ನು ತೆಗೆದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಕತ್ತಿಯಿಂದ ಎಡಕೈಯ ರಟ್ಟೆಗೆ ಹಾಗೂ ಬೆನ್ನಿಗೆ ಕಡಿದು ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ ಪುತ್ತೂರು ಠಾಣೆಯಲ್ಲಿ ಐಪಿಸಿ 341, 324, 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆ ಈ ಪ್ರಕರಣ ಪುತ್ತೂರಿನ ಜನರನ್ನು ಭಯಭೀತರನ್ನಾಗಿ ಮಾಡಿದೆ.