Recent Posts

Monday, April 14, 2025
ಸುದ್ದಿ

ಅಜ್ಜಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಯುವಕ – ಕಹಳೆ ನ್ಯೂಸ್

ಪಂಜದಿಂದ ಬಸ್ ಹತ್ತಿ ಕಡಬದಲ್ಲಿ ಇಳಿದು ರಾಮಕುಂಜಕ್ಕೆ ತೆರಳಬೇಕಿದ್ದ ಅಜ್ಜಿಯನ್ನು ಕೆ.ಎಸ್.ಆರ್.ಟಿ .ಸಿ ಬಸ್ ನಿರ್ವಾಹಕ ಬಲ್ಯ ಸಮೀಪದ ಸಮೀಪ ಕುರುಬರಕೇರಿಯಲ್ಲಿ ಇಳಿಸಿ ಹೋದ ಅವಮಾನವೀಯ ಘಟನೆ ನಡೆದಿದ್ದು, ಬಳಿಕ ಕಾಲೇಜು ಯುವಕನೊಬ್ಬ ಹಿರಿಯ ಜೀವವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಪ್ರಸ್ತುತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯದಲ್ಲಿ ದ್ವೀತಿಯ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ದೀಪಕ್ ಬಟ್ಟಿಗದ್ದೆ ಅಜ್ಜಿಯನ್ನು ಸುರಕ್ಷಿತವಾಗಿ ರಾಮಕುಂಜದ ಗೋಳಿತ್ತಡಿಗೆ ತಲುಪಿಸಿ ಮಾನವೀಯತೆ ಮೆರೆದ ಯುವಕ.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಕ್ ತನ್ನ ಮನೆ ಕುರಬರಕೇರಿ ಸಮೀಪದಿಂದ ಕಾಲೇಜಿಗೆ ಮರುದಾಖಲಾತಿ ಮಾಡಿಸಿಕೊಳ್ಳಲು ಸುಬ್ರಹ್ಮಣ್ಯಕ್ಕೆ ಹೊರಟಿದ್ದರು. ಈ ವೇಳೆ ಅಜ್ಜಿಯೊಬ್ಬರು ತನ್ನ ಅಸಹಾಯಕೆಯನ್ನು ತೋರ್ಪಡಿಸಿ ಕಣ್ಣುದೃಷಿಯೂ ಮಂಜಾಗಿದ್ದು, ಕಿವಿಯೂ ಸ್ಪಷ್ಟವಾಗಿ ಕೇಳಿಸುತ್ತಿಲ್ಲ ಎಂದು ಹೇಳುತ್ತಾ ಬೊಬ್ಬೆ ಹೊಡೆಯುವುದು ಕಂಡು ಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಯುವಕ ವಿಚಾರಿಸಿದಾಗ ತಾನು ಪಂಜದಿಂದ ಬಂದಿದ್ದು, ರಾಮಕುಂಜದ ಗೋಳಿತ್ತಡಿಗೆ ಮಗಳ ಮನೆಗೆ ಹೋಗುತ್ತಿದ್ದು, ಬಸ್ ನಿರ್ವಾಹಕ ಎಲ್ಲೋ ಇಳಿಸಿ ಹೋಗಿರುವುದನ್ನು ವಿವರಿಸಿದರು. ಈ ಹಿರಿಯ ಜೀವವನ್ನು ತಲುಪಿಸುವ ಸಲುವಾಗಿ ಕುರುಬರಕೇರಿಯಿಂದ ಬಲ್ಯ ಕ್ರಾಸ್, ನಂತರ ರಾಮಕುಂಜದ ಗೋಳಿತ್ತಡಿಗೆ ತಲುಪಿಸಿದಲ್ಲದೆ ಬಸ್ ಖರ್ಚನ್ನೂ ತಾನೇ ಭರಿಸಿ ತದನಂದರ ಎರಡು ಗಂಟೆಯ ಸುಮಾರಿಗೆ ಸುಬ್ರಹ್ಮಣ್ಯ ಕಾಲೇಜಿಗೆ ತಲುಪಿದರು.

ಇಂದಿನ ಕಾಲಘಟ್ಟದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿರಿಯರನ್ನು ತಮಾಷೆಯ ವಸ್ತುವಿನಂತೆ ಕಾಣುವ ವರ್ಗ ಹೆಚ್ಚಾಗಿದ್ದು, ಈ ನಡುವೆ ಕಾಲೇಜು ಯುವಕನ ಮಾನವೀಯ ಗುಣಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ. ವಿದ್ಯಾರ್ಥಿಯ ಸೇವ ಮನೋಭಾವ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಹಾರೈಸೋಣ.

ಗಣೇಶ್ ಇಡಾಳ, ಕಹಳೆ ನ್ಯೂಸ್ ಕಡಬ

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ