ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಕಳ್ಳಸಗಾಣಿಕೆಯ ಕುರಿತು ಬಜರಂಗದಳದ ರಾಜ್ಯ ಸಂಚಾಲಕರಾದ ಸುನಿಲ್ ಕೆ.ಆರ್ ಹಾಗು ಬಜರಂಗದಳದ ತಾಲೂಕು ಸಂಚಾಲಕ ಗುರುಪ್ರಸಾದ್ ನಾರಾವಿಯವರು ಕಾರ್ಕಳ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಜಿಲ್ಲಾ ಸಹಸಂಚಾಲಕರಾದ ಸುಧೀರ್ ನಿಟ್ಟೆ ಗೋ ರಕ್ಷಣೆಯಲ್ಲಿ ಪ್ರಮುಖರಾದ ನೀತಿನ್ ಕರಿಯಕಲ್ಲು, ನಗರ ಸಂಚಾಲಕ ರಾಘವೇಂದ್ರ ಕುಲಾಲ್, ಬಜರಂಗದಳದ ಪ್ರಮುಖರಾದ ಸುಮಿತ್ ಬಜಗೋಳಿ, ಹರೀಶ್ ಕಿಚ್ಚ, ಪ್ರಸಾದ್ ನಿಟ್ಟೆ, ಶರತ್ ನಿಟ್ಟೆ, ಸಂತೋಷ್ ಶೆಟ್ಟಿ, ಮತ್ತು ಬಜರಂಗದಳ ಅನೇಕ ಕಾರ್ಯಕತರು ಗೋಕಳ್ಳ ಸಾಗಾಣಿಕೆ ಬಗ್ಗೆ ಸರಿಯಾದ ತನಿಖೆ ನಡೆಸಿ ಮತ್ತು ಮುಡಾರಿನಲ್ಲಿ ಆಕ್ರಮವಾಗಿ ಗೋ ಸಾಗಾಟ ಮಾಡಿ ಬಜರಂಗದಳದವರ ಕೈಗೆ ಸಿಕ್ಕಿ ಬಿದ್ದ 5 ಜನ ಗೋ ಹಂತಕರನ್ನು ಪೋಲಿಸರ ವಶಕ್ಕೆ ಕೊಟ್ಟಿದ್ದಾರೆ. ಗೋ ಹಂತಕರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದಾರೆ.