ರಾಕಿಂಗ್ ಸ್ಟಾರ್ ಯಶ್ ಸದ್ಯ ಬಹು ನಿರೀಕ್ಷೆಯ ‘ಕೆಜಿಎಫ್-2 ‘ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮಂಡ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ, ಸುಮಲತಾ ಅವರ ಗೆಲುವಿನ ನಂತರ ಸ್ವಾಭಿಮಾನಿ ಸಮಾವೇಶದಲ್ಲೂ ಭಾಗಿಯಾಗಿ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ ನಂತರ ರಾಕಿ ಭಾಯ್ ಈಗ ಮತ್ತೆ ಕೆಜಿಎಫ್ ಕಡೆ ಮುಖ ಮಾಡಿದ್ದಾರೆ. ಸದ್ಯ ಚಿತ್ರಕ್ಕಾಗಿ ವರ್ಕೌಟ್ ನಲ್ಲಿ ಬ್ಯುಸಿ ಇರುವ ಯಶ್ ಇದೆ ತಿಂಗಳು 6ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಮೈಸೂರಿನಲ್ಲಿ ನಡೆಯುವ ಚಿತ್ರೀಕಣದಲ್ಲಿ ಹಾಜರಾಗುವ ಮೂಲಕ ‘ಕೆಜಿಎಫ್ ಚಾಪ್ಟರ್-2’ ಚಿತ್ರವನ್ನು ಮೈಸೂರಿನಿಂದ ಪ್ರಾರಂಭಿಸುತ್ತಿದ್ದಾರೆ. ಜೂನ್ ಮೊದಲ ವಾರದಿಂದ ‘ಕೆಜಿಎಫ್2′
ಚಿತ್ರೀಕರಣಕ್ಕೆ ರಾಕಿ ಭಾಯ್ ಎಂಟ್ರಿ ಇದರ ನಡುವೆ ರಾಕಿ ಭಾಯ್ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉದ್ದ ಕೂದಲು ಮತ್ತು ಉದ್ದ ದಾಡಿ ಬಿಟ್ಟಿರುವ ಯಶ್ ರಾಯಲ್ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ.
ಈ ಫೋಟೋ ಈಗ ಯಾವ ಚಿತ್ರದ್ದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಅಂದ್ಹಾಗೆ ಈ ಹೊಸ ಫೋಟೋ ಜಾಹಿರಾತು ಒಂದರ ದೃಶ್ಯ. ಆದ್ರೆ ಈ ಹೊಸ ಲುಕ್ ಬೀಯರ್ಡೋ ಫಾರ್ ಮೆನ್ ಎಂಬ ಅಂತರಾಷ್ಟ್ರೀಯ ಕಂಪೆನಿ ಜಾಹಿರಾತಿನ ಫೋಟೋ ಶೂಟ್ ಇದಾಗಿದೆ. ‘ಕೆಜಿಎಫ್’ ಚಿತ್ರದಲ್ಲೂ ಯಶ್ ಉದ್ದ ಕೂದಲು ಮತ್ತು ದಾಡಿ ಬಿಟ್ಟಿದ್ದರು. ಪಾರ್ಟ-2 ನಲ್ಲೂ ಅದೇ ಲುಕ್ ನಲ್ಲಿ ಮಿಂಚಲಿದ್ದಾರೆ. ಮೊದಲ ಭಾಗಕ್ಕಿಂತ ‘ಕೆಜಿಎಫ್ ಚಾಪ್ಟರ್-2′ ಮತ್ತಷ್ಟು ಅದ್ಧೂರಿಯಾಗಿರಲಿದೆಯಂತೆ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ಸ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.