Thursday, January 23, 2025
ಸುದ್ದಿ

ನಾದಬ್ರಹ್ಮ ದಿವಂಗತ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

ನಾದಬ್ರಹ್ಮ ದಿವಂಗತ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆಯಿತು. ಯಕ್ಷಗಾನಕ್ಷೇತ್ರದ ಭಾಗವತಿಕೆಯಲ್ಲಿ ಮಹೋನ್ನತ ಸಾಧನೆಗೈದ ನೆಬ್ಬೂರು ಭಾಗವತರು ಹವ್ಯಕ ಸಮಾಜದ ಹೆಮ್ಮೆಯಾಗಿದ್ದು, ಪುಷ್ಪಾಂಜಲಿ, ಕಾವ್ಯಾಂಜಲಿ, ಭಾವಾಂಜಲಿ ಹಾಗೂ ನಾಟ್ಯಾಂಜಲಿ ಎಂಬ ವಿವಿಧ ಪ್ರಾಕಾರಗಳ ಮೂಲಕ ನೆಬ್ಬೂರರನ್ನು ಸ್ಮರಿಸಿ ಅವರಿಗೆ ಅರ್ಥಪೂರ್ಣವಾದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಎಂ ಎ ಹೆಗಡೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಅಧ್ಯಕ್ಷತೆವಹಿಸಿದ್ದರು.
ಯಕ್ಷಗಾನ ಚಿಂತಕ ಹುಕ್ಲಮಕ್ಕಿ ಶ್ರೀಪಾದ ಹೆಗಡೆ ನೆಬ್ಬೂರರ ಕುರಿತಾಗಿ ಸಭೆಗೆ ತಿಳಿಸಿ ‘ಪುಷ್ಪಾಂಜಲಿ’ ಸಲ್ಲಿಸಿದರು. ಸುಧಾಕಿರಣ ಅಧಿಕಶ್ರೇಣಿ, ಭಾರತೀ ಹೆಗಡೆ ಕಾವ್ಯಾಂಜಲಿಯ ಮೂಲಕ ಗೌರವ ಸಲ್ಲಿಸಿದರೆ, ಅನಂತ ಪಾಠಕ್ ಗಾನಾಂಜಲಿಯ ಮೂಲಕ ಶ್ರಂದ್ಧಾಂಜಲಿ ಸಲ್ಲಿಸಿದರು. ಹಣಜಿಬೈಲ್ ಸಹೋದರರು ಯಕ್ಷಗಾನದ ಮೂಲಕ ನಾಟ್ಯಾಂಜಲಿ ಸಮರ್ಪಿಸಿದರು.
ಪ್ರಜಾವಾಣಿಯ ಕಾರ್ಯನಿರ್ವಾಹ ಸಂಪಾದಕ ರವೀಂದ್ರಭಟ್ ಐನಕೈ ಹಾಗೂ ಖ್ಯಾತ ಅರ್ಥದಾರಿಗಳಾದ ಮೋಹನಭಾಸ್ಕರ ಹೆಗಡೆ ನೆಬ್ಬೂರರೊಂದಿಗೆ ತಮ್ಮ ಒಡನಾಟ ಹಾಗೂ ಯಕ್ಷಗಾನದೊಂದಿಗೆ ನೆಬ್ಬೂರರ ಒಡನಾಟವನ್ನು ಹಂಚಿಕೊಂಡು ನೆಬ್ಬೂರರಿಗೆ ಭಾವಾಂಜಲಿ ಸಲ್ಲಿಸಿದರು.
ಸಂಚಾಲಕರಾದ ಸದಾನಂದ ಹೆಗಡೆ ಹಣಜಿಬೈಲ್ ಕಾರ್ಯಕ್ರಮವನ್ನು ಸಂಘಟಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ್ ಸಂಪ, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಸೇರಿದಂತೆ ಪದಾಧಿಕಾರಿಗಳು ಹಾಗೂ ನೂರಾರು ಯಕ್ಷಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ, ನೆಬ್ಬೂರರಿಗೆ ಗೌರವ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು