Thursday, January 23, 2025
ಸುದ್ದಿ

ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ – ಕಹಳೆ ನ್ಯೂಸ್

ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ:-  ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪುದ್ದೋಟು, ಮಂಚಿ, ಬಂಟ್ವಾಳ ತಾಲೂಕು ಇಲ್ಲಿನ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ ಮಾಡಲಾಯಿತು. ದಿವ್ಯಶ್ರೀ ಬಳಗದವರು ವಂದನಾ ಗೀತೆ ಹಾಡಿದರು. ದಿನೇಶ್ ಕುಮಾರ್  ಕ್ಯಾಂಪ್ಕೊ ಸ್ವಾಗತ ವನ್ನು ನೀಡಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷರು ಕ್ಯಾಂಪ್ಕೋ ನಿಯಮಿತ ಮಂಗಳೂರು  ನರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪ್ರಮೀಳಾ ಅಧ್ಯಕ್ಷರು ಗ್ರಾಮ ಪಂಚಾಯತು ಮಂಚಿ ಇವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಮೋಹನ್ ದಾಸ್ ಶೆಟ್ಟಿ ಉಪಾಧ್ಯಕ್ಷರು ಗ್ರಾಮ ಪಂಚಾಯತು ಮಂಚಿ, ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ಉಪಾಧ್ಯಕ್ಷರು ಕ್ಯಾಂಪ್ಕೋ ನಿಯಮಿತ ಮಂಗಳೂರು, ಶ್ರೀ ಗಣೇಶ್ ಸಂಯೋಜಕರು ಕ್ಯಾಂಪ್ಕೊ ಇನ್ ಸೇವಾ, ಶ್ರೀ ಅಶೋಕ್ ನಾಯಕ್ ಪಿ ಅಧ್ಯಕ್ಷರು ಎಸ್.ಡಿ.ಎಂ.ಸಿ, ಶ್ರೀಮತಿ ಇಂದಿರಾ. ಐ ಸಮೂಹ ಸಂಪನ್ನೂಲ ವ್ಯಕ್ತಿಗಳು ಮಂಚಿ ಕ್ಲಸ್ಟರ್, ಶ್ರೀ ದಿನೇಶ್ ಕುಮಾರ್ .ಕೆ ಶ್ರೀ ಕ್ರಷ್ಣ ಮಿತ್ರ ಮಂಡಳಿ (ರಿ) ಮಂಚಿ ಕೊಳ್ನಾಡು, ರೇಶ್ಮ ಮಲ್ಯ ಜನರಲ್ ಮೇನೇಜರ್ ಕ್ಯಾಂಪ್ಕೋ ನಿಯಮಿತ ಮಂಗಳೂರು, ವಿ.ಸುರೇಶ್  ಕ್ಯಾಂಪ್ಕೋ ನಿಯಮಿತ ಮಂಗಳೂರು, ಅರುಣ ಶೆಟ್ಟಿ ಕ್ಯಾಂಪ್ಕೋ ನಿಯಮಿತ ಮಂಗಳೂರು ಇವರು ಉಪಸ್ಥಿತರಿದ್ದರು .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು