ಹುಬ್ಬಳ್ಳಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ | ಯೋಗಿ ಆದಿತ್ಯನಾಥ್ ದಿಕ್ಸೂಚಿ ಭಾಷಣ ; ಗಾಯಕ ಜಗದೀಶ್ ಪುತ್ತೂರು ಭಕ್ತಿಗಾಯನ
ಹುಬ್ಬಳ್ಳಿ : ಗುಜರಾತ್ ಬಳಿಕ ಈಗ ರಾಜ್ಯದ ವಿಧಾನಸಭಾ ಚುನಾವಣೆಯದ್ದೆ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣಾ ರಣಕಳೆ ಮೊಳಗಿಸಿವೆ. ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ನಡೆಯುವ ಪರಿವರ್ತನಾ ಯಾತ್ರೆಗೆ ಯೋಗಿ ಅದಿತ್ಯನಾಥ್ ಕರೆತರುವ ಮೂಲಕ ಹೊಸ ಸಂಚಲನ ಮೂಡಿಸುತ್ತಿದೆ. ಹೌದು, ಗುಜರಾತ್ ಫಲಿತಾಂಶ ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ವಿಧಾನ ವಿಧಾನಸಭಾ ಚುನಾವಣೆಗೆ ಅಧಿಕೃತ ರಣಕಹಳೆ ಮೊಳಗಿಸಲು ಬಿಜೆಪಿ ರೆಡಿಯಾಗಿದೆ. 75 ದಿನಗಳ ಪರಿವರ್ತನಾ ಯಾತ್ರೆ ಡಿಸೆಂಬರ್ 21 ಕ್ಕೆ ಉತ್ತರ ಕರ್ನಾಟಕ ದ ಹೆಬ್ಬಾಗಿಲು ಹುಬ್ಬಳ್ಳಿಗೆ ಆಗಮಿಸಲಿದೆ.
ಅಂದು ನೆಹರು ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಪ್ರಮುಖ ಭಾಷಣಕಾರರಾಗಿ ಉತ್ತರ ಪ್ರದೇಶದ ಸಿಎಂ, ಫೈರ್ ಬ್ರ್ಯಾಂಡ್,ಯೋಗಿ ಆದಿತ್ಯನಾಥ್ ಭಾಗವಹಿಸುತ್ತಿದ್ದಾರೆ. ಮತ್ತೊಂದಡೆ, ಇದೇ ಸಮಾವೇಶದಲ್ಲಿ ಉತ್ತರ ಕರ್ನಾಟಕದ ದಶಕಗಳ ಬೇಡಿಕೆಯಾದ ಮಹದಾಯಿ ವಿವಾದ ಬಹೆಹರಿಸಿ, ರೈತರಿಗೆ ಉಡುಗೊರೆಯಾಗಿ ನೀಡುವ ಸಾಧ್ಯತೆ ಇದೆ.
ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ಗೋವಾ ಮುಖ್ಯಮಂತ್ರಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರೆ ವೇಳೆ ಮಹದಾಯಿ ವಿಚಾರ ಘೋಷಣೆಯಾಗುವ ಸಾದ್ಯತೆ ಇದೆ. ಒಟ್ಟಾರೆ ಹುಬ್ಬಳ್ಳಿಯಲ್ಲಿ ನಡೆಯುವ ಬಿಜೆಪಿಯ ಪರಿವರ್ತನಾ ಯಾತ್ರೆ, ಸಾಕಷ್ಟು ಕುತೂಹಲ ಕೆರಳಿಸಿದೆ, ಯೋಗಿ ಆದಿತ್ಯನಾಥ ಭಾಗವಹಿಸಿರೋದು ಒಂದಡೆಯಾದರೆ, ಕಳಸಾ ಬಂಡೂರಿ ವಿವಾದ ಬಗೆಹರಿಯುತ್ತೆ ಎಂಬ ನಿರೀಕ್ಷೆ ಜನರಲ್ಲಿ ಸಂತಸ ಮೂಡಿಸಿದೆ.
ಜಗದೀಶ್ ಪುತ್ತೂರು ತಂಡದಿಂದ ದೇಶಭಕ್ತಿಗೀತೆಗಳ ಗಾಯನ :
ಪರಿವರ್ತನಾ ಯಾತ್ರೆಯ ಶೀರ್ಶಿಕೆ ಗೀತೆಯ ಮೂಲಕ ಮನೆ ಮಾತಾದ ಅರ್ಯಭಟ ಪ್ರಶಸ್ತಿ ಪುರಸ್ಕತ ಗಾಯಕ ಜಗದೀಶ್ ಪುತ್ತೂರು ಬಳಗದವರಿಂದ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದ ಮೊದಲು ಮುಖ್ಯ ವೇದಿಕೆಯಲ್ಲಿ ದೇಶಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.