ಬಿಎಸ್ ಯಡಿಯೂರಪ್ಪ ತವರು ಶಿಕಾರಿಪುರದಲ್ಲೇ ಬಿಜೆಪಿಗೆ ಭಾರೀ ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ ಸ್ವ-ಕ್ಷೇತ್ರ ಶಿಕಾರಿಪುರದಲ್ಲಿಯೇ ಭಾರೀ ಹಿನ್ನಡೆಯಾಗಿದ್ದು, ಪುರಸಭೆಯ 23 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ 12ರಲ್ಲಿ ಕಾಂಗ್ರೆಸ್, ಬಿಜೆಪಿ 8 ಹಾಗೂ ಪಕ್ಷೇತರರು 3 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶಿಕಾರಿಪುರ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲುಕಂಡಿದೆ. ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 12ರಲ್ಲಿ ಗೆಲುವು ಸಾಧಿಸಿದರೆ, ಕೇವಲ ಎಂಟು ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಗೆಲುವಿನ ನಗೆ ಬೀರಿದೆ. ಇನ್ನು ಮೂರು ವಾರ್ಡ್‍ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಸದ್ಯ ಕಾಂಗ್ರೆಸ್‍ನವರು ಶಿಕಾರಿಪುರ ಪುರಸಭಾ ಅಧಿಕಾರದ ಗದ್ದುಗೆ ಏರಲಿದ್ದಾರೆ.
ಇನ್ನು ರಾಜ್ಯಾದ್ಯಂತ ನಡೆದ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನದಲ್ಲಿದ್ದರೆ ದ್ವಿತೀಯ ಸ್ಥಾನಕ್ಕೆ ಕಮಲ ಪಡೆ ತೃಪ್ತಿಪಟ್ಟುಕೊಂಡಿದೆ. ಮೂರನೇ ಸ್ಥಾನಕ್ಕೆ ಜೆಡಿಎಸ್ ಸಮಾಧಾನಪಟ್ಟುಕೊಂಡಿದೆ.