Wednesday, January 22, 2025
ರಾಜಕೀಯಸುದ್ದಿ

ನನ್ನ ಗೆಲುವಿಗೆ ಕೈ ಬೆಂಬಲಿಸಿದ್ದು ನಿಜ: ತುಮಕೂರು ಬಿಜೆಪಿ ಎಂಪಿ – ಕಹಳೆ ನ್ಯೂಸ್

ತುಮಕೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧೆ ಮಾಡಿ ದೇವೇಗೌಡರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಜಿ.ಎಸ್.ಬಸವರಾಜು  ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದಾರೆ.

ಇನ್ನು ಬಸವರಾಜು ಕೈ ಹಿಡಿಯಲಿದ್ದಾರೆ ಎನ್ನುವ ವದಂತಿಗೂ ಸ್ಪಷ್ಟನೆ ನೀಡಿದ್ದು, ನಾನು ಕಾಂಗ್ರೆಸ್ ಗೆ ಹೋಗುವುದು ಇಲ್ಲ. ಯಾರನ್ನು ಅಲ್ಲಿಂದ ಕರೆತರುವುದು ಇಲ್ಲ ಹೀಗೆಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನನಗೆ ಚುನಾವಣೆ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ನಾಯಕರು ಬೆಂಬಲ ನೀಡಿದ್ದಾರೆ. ಕೆ.ಎನ್. ರಾಜಣ್ಣ ಅವರು ಬೆಂಬಲ ನೀಡಿದ್ದಾರೆ. ಇನ್ನು ರಾಜಣ್ಣ ಬೆಂಬಲಿಗರೂ ಕೂಡ ಸಿಂಪತಿಯಿಂದ ತಮಗೆ ಮತ ನೀಡಿದ್ದಾರೆ ಎಂದು ತುಮಕೂರಿನಲ್ಲಿ ಬಸವರಾಜು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಇಚ್ಛಿಸುವುದಿಲ್ಲ ಎಂದ ಅವರು ಆರೋಗ್ಯ ಚೆನ್ನಾಗಿದ್ದಲ್ಲಿ ಯಾರನ್ನಾದರೂ ಸ್ಪರ್ಧೆಗೆ ನಿಲ್ಲಿಸುತ್ತೇನೆ ಎಂದರು.

ತುಮಕೂರಿನಲ್ಲಿ ಜೆಡಿಎಸ್ ಹಿರಿಯ ನಾಯಕ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ತಾವು ಗೆಲುವು ಸಾಧಿಸಿದ್ದು, ಮಧುಗಿರಿ ಹಾಲಿ ಶಾಸಕ ವೀರಭದ್ರು ಕಾರ್ಯ ವೈಖರಿ ನೋಡಿ ಜನ ಬಿಜೆಪಿ ಮೆಚ್ಚಿ ಮತ ನೀಡಿದ್ದಾರೆ ಎಂದು ಬಸವರಾಜು ಹೇಳಿದರು.