ನವದೆಹಲಿ: ಜೈ ಶ್ರೀ ರಾಮ್ ಘೋಷಣೆ ಕೂಗಿದವರನ್ನು ಜೈಲಿಗಟ್ಟಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಕ್ಷಸ ಹಿರಣ್ಯ ಕಶಿಪು ವಂಶದವರು ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ‘ಹಿರಣ್ಯಕಶಿಪು ವಿಷ್ಣುವಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ತನ್ನ ಮಗನಾದ ಪ್ರಹ್ಲಾದ ನಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಾನೆ.
ಅಲ್ಲದೆ, ಆತನನ್ನು ಸೆರೆವಾಸದಲ್ಲಿಡುತ್ತಾನೆ. ಹಿರಣ್ಯಕಶಿಪು ರೀತಿಯಲ್ಲೇ ಮಮತಾ ಅವರು ಜೈ ಶ್ರೀ ರಾಮ್ ಘೋಷಣೆ ಕೂಗಿದವರನ್ನು ಜೈಲಿಗಟ್ಟುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.