Wednesday, January 22, 2025
ಸುದ್ದಿ

ಮೀಟರ್ ದಂಧೆ ವಿಚಾರಕ್ಕೆ ತಾಯಿ, ಮಗ ಸಾವು; ಪ್ರಕರಣಕ್ಕೆ ಹೊಸ ತಿರುವು – ಕಹಳೆ ನ್ಯೂಸ್

ಬೆಂಗಳೂರು : ಮೀಟರ್ ದಂಧೆ ವಿಚಾರಕ್ಕೆ ತಾಯಿ, ಮಗ  ನೇಣಿಗೆ ಶರಣಾದ ಪ್ರಕರಣ ಇದೀಗ ದೊಡ್ಡ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನಿಗೆ ನೇಣು ಹಾಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಹೆಚ್‍.ಎ.ಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಮೃತರು. 2 ವರ್ಷಗಳ ಹಿಂದೆ ಗೀತಾಬಾಯಿ ಸುಧಾ ಎಂಬುವರ ಬಳಿ 40,000 ರೂ. ಸಾಲ ಪಡೆದುಕೊಂಡು ತೀರಿಸಿದ್ದಾರೆ. ಆದರೂ ಹಣ ನೀಡುವಂತೆ ಸುಧಾ ಮತ್ತು ಆಕೆಯ ಸಹಚರರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ ಗೀತಾಬಾಯಿ ಹಾಗೂ ಆಕೆಯ ಮಗ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪತಿ ಸುರೇಶ್ ತಿಳಿಸಿದ್ದು, ಈ ಬಗ್ಗೆ ಹೆಚ್‍.ಎ.ಎಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ತಂದೆ ಸುರೇಶ್ ನ ಮೊಬೈಲ್ ನಲ್ಲಿ ಆತನೇ ತನ್ನ ಮಗನಿಗೆ ನೇಣು ಹಾಕಿ ಕೊಲೆ ಮಾಡಿರುವ ದೃಶ್ಯ ಸೆರೆಯಾಗಿದೆ. ಅಲ್ಲದೇ  ಪುತ್ರನ ಸಾವಿನಿಂದ ನೊಂದು ಗೀತಾಬಾಯಿ ನೇಣು ಹಾಕಿಕೊಂಡಿದ್ದಾರೆ ಎಂಬ ವಿಚಾರ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು