Tuesday, January 21, 2025
ಸುದ್ದಿ

ಅಕ್ರಮ ಗಾಂಜಾ ಮಾರಾಟ : ಯುವಕನ ಬಂಧನ – ಕಹಳೆ ನ್ಯೂಸ್

ಬಂಟ್ವಾಳ: ಅಕ್ರಮವಾಗಿ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ತಿರುಗಾಡುತ್ತಿದ್ದು, ಇಲ್ಲಿನ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಈತನ ಬಂಧಿಸಿದ್ದಾರೆ.
ಕುಕ್ಕಾಜೆ ಮಂಚಿ ನಿವಾಸಿ ,ದಿ.ಅಬುಬಕ್ಕರ್ ಅವರ ಮಗ ಸಂಶುದ್ದೀನ್ (25)ಬಂಧಿತ ಆರೋಪಿ. ಬಂಧಿತನಿಂದ 1ಕೆ.ಜಿ. 896 ಗ್ರಾಂ.ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಾಚರಣೆ ಯಲ್ಲಿ ಎಸ್. ಪಿ. ಲಕ್ಮೀಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಎ.ಎಸ್.ಪಿ.ಸೈದುಲು ಅಡಾವತ್ ಅವರ ನಿರ್ದೇಶನದಂತೆ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರ ನೇತ್ರತ್ವದಲ್ಲಿ ಸಿಬ್ಬಂದಿ ಗಳಾದ ಉದಯ ರೈ, ವಿವೇಕ್ ರೈ, ಪ್ರವೀಣ್ ದೇವಾಡಿಗ, ವಾಸುನಾಯ್ಕ್, ಪ್ರಶಾಂತ್ , ಸತೀಶ್, ಸೌಮ್ಯ, ಲೋಕೇಶ್, ಮೋಹನ್, ಶ್ರೀಕಾಂತ್, ಚಾಲಕ ವಿಜಯ ಗೌಡ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು