Tuesday, January 21, 2025
ಸುದ್ದಿ

ಕ್ಯಾಂಟೀನ್‍ಗೆ ಭೇಟಿ ನೀಡಿ ಕೇಸರಿ ಬಾತ್ ರುಚಿ ಸವಿದ ಬಿ.ರಮಾನಾಥ ರೈ – ಕಹಳೆ ನ್ಯೂಸ್

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜೂನ್ 3 ಸೋಮವಾರ ಸಂಜೆಯ ವೇಳೆ ಹಾಗೆ ಸುಮ್ಮನೆ ಬಿಸಿರೋಡಿನ ಇಂದಿರಾ ಕ್ಯಾಂಟೀನ್‍ಗೆ ಬೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯಾಂಟೀನ್‍ಗೆ ಬೇಟಿ ನೀಡಿದ ವೇಳೆ ಸಂಜೆಯ ಉಪಾಹಾರ ಕೇಸರಿ ಬಾತ್ ತಿಂದು ರುಚಿ ಸವಿದರು. ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಬಂದ ಅನೇಕರು ಕ್ಯಾಂಟೀನ್‍ನಲ್ಲಿ ತಿಂಡಿಯ ಜೊತೆಗೆ ಚಹಾ ಕೂಡಾ ಸಿಗುವಂತೆ ಮಾಡಬೇಕು ಎಂದು ರೈ ಅವರಲ್ಲಿ ಕೇಳಿಕೊಂಡರು. ಜನರ ಮನವಿಗೆ ಸ್ಪಂದಿಸಿದ ರಮಾನಾಥ ರೈ ಅವರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಸದಾನಂದ ಶೆಟ್ಟಿ ಪಂಜಿಕಲ್ಲು, ಚಿತ್ತರಂಜನ್ ಶೆಟ್ಟಿ, ಸುರೇಶ್ ಜೊಹರಾ, ಮೋಹನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.