ಅಕ್ರಮವಾಗಿ ಕಸಾಯಿಕಾನೆ ನಡೆಸುತ್ತಿದ್ದ ಮನೆಗೆ ದಾಳಿ : 24 ಜೀವಂತ ಹಸುಗಳನ್ನು ರಕ್ಷಿಸಿದ ಪಣಂಬೂರು ಪೋಲೀಸರು – ಕಹಳೆ ನ್ಯೂಸ್
ಬಂಟ್ವಾಳ: ಅಕ್ರಮವಾಗಿ ಕಸಾಯಿಕಾನೆ ನಡೆಸುತ್ತಿದ್ದ ಮನೆಯೊಂದಕ್ಕೆ ದಾಳಿ ನಡೆಸಿದ ಪಣಂಬೂರು ಪೋಲೀಸರು 24 ಜೀವಂತ ಹಸುಗಳ ಸಹಿತ ಒರ್ವನನ್ನು ಬಂಧಿಸಿದ್ದಾರೆ.
ಮಂಗಳೂರು ಜೋಕಟ್ಟೆ ಎಂಬಲ್ಲಿ, ಅಕ್ರಮ ಕಸಾಯಿಕಾನೆಗೆ ನಡೆಸುತ್ತಿದ್ದು ಗೋವುಗಳನ್ನು ವದೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೋಲೀಸರು ದಾಳಿ ನಡೆಸಿದಾಗ ಮನೆಯ ಮಾಲಕ ಸೇರಿದಂತೆ ಹಲವರು ಅಲ್ಲಿಂದ ಓಡಿಹೋಗಿದ್ದಾರೆ. ಒರ್ವ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಜೋಕಟ್ಟೆ ನಿವಾಸಿ ಹನೀಫ್ ಎಂಬವರ ಮನೆಯ ಪಕ್ಕದ ಶೆಡ್‍ನಲ್ಲಿ ಅಕ್ರಮ ಕಸಾಯಿಕಾನೆ ನಡೆಯುತ್ತಿತ್ತು. ಮನೆ ಮಾಲಕ ಹನೀಪ್ ಹಾಗೂ ಇನ್ನುಳಿದವರು ಓಡಿ ಹೋಗಿದ್ದಾರೆ.
ದಾಳಿಯ ವೇಳೆ ವದೆ ಮಾಡಲು ಕಟ್ಟಿ ಹಾಕಿದ್ದ 24 ಜೀವಂತ ಹಸುಗಳನ್ನು ಹಾಗೂ ಮೂರು ದನಗಳನ್ನು ವದೆ ಮಾಡಲಾಗಿದ್ದು , ಮೂರು ದನಗಳ ಮಾಂಸವನ್ನು ವಶಪಡಿಸಿ ಕೊಳ್ಳಲಾಗಿದೆ. ಎಸಿ.ಪಿ ಶ್ರೀನಿವಾಸ ಗೌಡ ಹಾಗೂ ಪಣಂಬೂರು ಪಿ.ಐ. ಸತ್ಯನಾರಾಯಣ ರಾವ್, ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಸಿದ್ದರು.