Sunday, January 19, 2025
ಸುದ್ದಿ

ಹಿಂದೂ ಮುಖಂಡರ ಬಂಧನ, ನಿರಂತರ ಕಿರುಕುಳ, ಹಲ್ಲೆ ಖಂಡಿಸಿ ಜ.2 ರಂದು ಬೃಹತ್ ಪ್ರತಿಭಟನೆ – ಚನಿಲ

 

ಪುತ್ತೂರು : ಕಳೆದ ಎರಡು ದಿನದ ಹಿಂದೆ ಸಂಪ್ಯಾ ಠಾಣಾ ವ್ಯಪ್ತಿಯಲ್ಲಿ ನಡೆದ ಘಟನೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ಹಿಂದೆಯೂ ಹಿಂದೂಗಳ ಮೇಲೆ ಸಾಲು ಸಾಲು ದೌರ್ಜನ್ಯಗಳು ನಡೆದಿದೆ, ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ ಪುತ್ತೂರಿನಲ್ಲಿ ಜನವರಿ 2 ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಪುತ್ತೂರು ತಾಲ್ಲೂಕು ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿನ್ನೆಲೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲ್ಲೂಕು ಬಡಗನ್ನೂರು ಸಮೀಪದ ಮೈಂದನಡ್ಕದಲ್ಲಿ ಯೂಸುಫ್ ಎಂಬ ಲಾರಿ ಚಾಲಕ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದಾನೆ. ಘಟನೆಯನ್ನರಿತ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಗೆ ಧರ್ಮದೇಟು ನೀಡಿದ್ದಾರೆ. ಬಳಿಕ ಆರೋಪಿಯನ್ನು ಸಂಪ್ಯಾ ಠಾಣಾ ಪೋಲೀಸರಿಗೆ ತಂದೊಪ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪಿ ಬೆಂಬಲಕ್ಕೆ ಪಿ.ಎಫ್.ಐ. ಹಾಗೂ ಇನ್ನಿತರ ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಕಾರ್ಯಕರ್ತರು ಠಾಣೆಯ ಮುಂದೆ ಜಮಾವಣೆಗೊಂಡಿದ್ದರು. ಎರಡೂ ಸಂಘಟನೆಯ ಕಾರ್ಯಕರ್ತರು ಸೇರಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂಬ ಕಾರಣವನ್ನು ನೀಡಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ನಂತರ ಹಿಂದೂ ಸಂಘಟನೆಗಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ ಹಾಗೂ ಅಜಿತ್ ರೈ ಹೊಸಮನೆ, ರಜನೀಶ್ , ಶ್ರೀಧರ್ ತೆಂಕಿಲ ಸೇರಿದಂತೆ ಏಳು ಮಂದಿ ಮುಖಂಡರನ್ನು ಬಂಧಿಸಿದ್ದಾರೆ. ಈ ಹಿಂದೆ ಹಿಂ.ಜಾ.ವೇ. ಮುಖಂಡರಾದ ಜಗದೀಶ್ ಕಾರಂತರು ಪೊಲೀಸ್ ವರ್ತನೆಯನ್ನು ಖಂಡಿಸಿ ಪ್ರತಿಭಟನೆಯಲ್ಲಿ ನೀಡಿದ ಹೇಳಿಕೆಯು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು ಮತ್ತು ಪರ ವಿರೋಧ ಚರ್ಚೆಗಳು ನಡೆದಿತ್ತು. ಅದರಿಂದ ಸಂಪ್ಯಾ ಠಾಣಾ ಪಿ.ಎಸ್.ಐ. ತೀವ್ರ ಮುಜುಗರಕ್ಕೀಡಾಗಿದ್ದರು. ಇದೀಗ ಸಿಕ್ಕಿದ್ದೇ ಸಂದರ್ಭ ಎಂದಿನಂತೆ ಯೋಚಿಸಿ ಹಿಂ.ಜಾ.ವೇ. ಮುಖಂಡರ ಮತ್ತು ಅಂದಿನ ಪ್ರತಿಭಟನೆ ಆಯೋಜಿಸಿದ್ದ ಪ್ರಮುಖ ಅಜಿತ್ ರೈ ಹೊಸಮುನೆ ಮೇಲೆ ಪೋಲೀಸರು ಹಲ್ಲೆ ನಡೆಸಿದ್ದಾರೆ. ಮೂರು ಲಾಠಿ ಮುರಿಯುವ ವರೆಗೂ ಭಾರಿಸಿದ್ದು ಪರಿಣಾಮ ಅಜಿತ್ ಅವರ ಕಾಲು ಮುರಿದಿದೆ. ಪ್ರಸ್ತುತ ಅಜಿತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಆರೋಪಿಗೆ ಸಂಪೂರ್ಣ ಸುರಕ್ಷೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಸಂಪ್ಯಾ ಠಾಣಾ ಎಸ್.ಐ. ಕಾದರ್ ಹಾಗೂ ಪೇದೆ ಚಂದ್ರ ತಮ್ಮ ಹಳೇ ಚಾಳಿ ಮುಂದುವರಿದಿದ್ದಾರೆ. ಪ್ರಕರಣದ ಆರೋಪಿಯನ್ನು ಠಾಣೆಗೆ ತಂದೊಪ್ಪಿಸಿದ ಮೇಲು ಆತನ ನೆಂಟರಿಷ್ಟರು, ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಠಾಣೆಯ ಮುಂದೆ ಜಮಾವಣೆ ಆಗುವ ವರೆಗೂ ಠಾಣೆಯಲ್ಲೇ ಇರಿಸುವ ಅಗತ್ಯವೇನಿತ್ತು ? ಪ್ರಕರಣದ ಗಂಭೀರತೆಯನ್ನು ಅರಿತು ಪೋಸ್ಕೋ ಅಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕಿತ್ತು ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.

ಈ ಕುರಿತು ಹೇಳಿಕೆ ನೀಡಿದ ಚನಿಲ ಬಜರಂಗದಳದ ಪ್ರಾಂತ ಸುರಕ್ಷಾ ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ ಹಾಗೂ ಹಿಂ.ಜಾ.ವೇ. ಮುಖಂಡರಾದ ಅಜಿತ್ ರೈ ಹಾಗೂ ಪರಿವಾರ ಕಾರ್ಯಕರ್ತರ ಬಂಧನ ಮತ್ತು ಹಲ್ಲೆ ಪ್ರಕರಣವನ್ನು ಖಂಡಿಸಿ ಸಂಘಪರಿವಾರ ಸಭೆ ನಡೆಸಿ ಉಗ್ರ ಪ್ರತಿಭಟನೆಗೆ ಚಿಂತನೆ ನಡೆಸಿದೆ. ಅಲ್ಲದೆ, ಹಿಂದೂ ಹಿತರಕ್ಷಣಾ ಸಮಿತಿ ಹೆಸರಿನಡಿಯಲ್ಲಿ ಪ್ರತಿಭಟನೆ ನಡೆಯಲಿದೆ. ಪುತ್ತೂರು, ಬಂಟ್ವಾಳ, ಸುಳ್ಯ,ಬೆಳ್ತಂಗಡಿ ಭಾಗಗಳಿಂದಲೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ ಸಹಜ್ ರೈ, ಸುನಿಲ್ ದಡ್ಡು, ಪುರುಶೋತ್ತಮ ಮುಂಗ್ಲಿಮನೆ ಜಾಗರಣಾ ವೇದಿಕೆ ಮುಖಂಡರಾದ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.

Leave a Response