ಪುತ್ತೂರು: ಮೈಂದನಡ್ಕದಲ್ಲಿ ಹಿಂದೂ ಬಾಲಕಿಗೆ , 48 ವರ್ಷ ಪ್ರಾಯದ ಯೂಸುಫ್ ಎಂಬಾತ ಕಿರುಕುಳ ನೀಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಘಟನೆಯ ಸಂಭಂದ ಇಂದು ಪುತ್ತೂರಿನ ವಾರ್ತಾ ಭವನದಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಅದರ ಪೂರ್ಣ ಪಾಠ ಇಂತಿದೆ.
ಮೈಂದನಡ್ಕ ಪ್ರಕರಣಕ್ಕೆ ಸಂಭಂದಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಂದ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆಯವರಿಂದ ಇಲಾಖೆ ಕೂಡಲೇ ಹೇಳಿಕೆ ಪಡೆದುಕೊಳ್ಳಬೇಕು. ಘಟನೆ ನಡೆದು 4 ದಿನಗಳಾದರೂ, ಪೊಲೀಸ್ ಇಲಾಖೆ ಹೇಳಿಕೆ ಪಡೆದಿಲ್ಲ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತ್ತಾಯ ಅಕ್ರೋಶ ವ್ಯಕ್ತ ಪಡಿಸಿದರು.
ಅಜಿತ್ ರೈಯವರಿಗೆ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದು , ಹಾಗಾಗಿ ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಲಿಖಿತ ಹೇಳಿಕೆ ನೀಡಿದ್ದಾರೆ. ಹಾಗಾಗಿ ಅವರನ್ನು ಖಾಸಗಿ ಅಸ್ಫತ್ರೆಗೆ ದಾಖಲಿಸಿ ಸ್ಟೇಷನಿಗೆ ಮಾಹಿತಿ ನೀಡಲಾಗಿದೆ. ಆದರೂ, ಪೊಲೀಸರು ಅವರಿಂದ ಹೇಳಿಕೆ ಪಡೆದಿಲ್ಲ. ಅಜೀತ್ ಅವರಿಗೆ ಮಾನಸಿಕ, ದೈಹಿಕ ಹಿಂಸೆ ನೀಡುವ ಮೂಲಕ ಸಂವಿಧಾನ ಬಾಹಿರ ಕೃತ್ಯ ಸಂಪ್ಯ ಠಾಣೆಯಿಂದ ಮಾಡಲಾಗಿದೆ ಎಂದು ಅವರು ಅಪಾದಿಸಿದರು.
ಇದೇ ಪ್ರಕರಣದಲ್ಲಿ ದಲಿತ ಯುವಕರೋಬ್ಬರಿಗೆ ಹಿಗ್ಗಾ ಮುಗ್ಗ ಥಲಿಸಲಾಗಿದೆ. ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೇ ಹಾಗೂ ಜಾತಿ ನಿಂದನೆ ನಡೆಸಲಾಗಿದೆ ಎಂದು ಅಪಾದಿಸಿದ ಅಡ್ಯಂತ್ತಾಯರವರು ಪುತ್ತೂರಿನಲ್ಲಿ ಜಗದೀಶ್ ಕಾರಂತರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಗೆ ಸೇಡು ತೀರಿಸುವ ಉದ್ದೇಶದಿಂದ ಹಿಂಜಾವೇ ಹಾಗೂ ಬಜರಂಗದಳದ ಪ್ರಮುಖರನ್ನು ಗುರಿಯಾಗಿಸಿ ಮನಬಂದಂತೆ ಹಲ್ಲೆ ನಡೆಸಲಾಗಿದೆ ಎಂದರು.
ಪುತ್ತೂರು ಬಂದ್ :
ಇದೇ ಘಟನೆಗೆ ಸಂಭಂದಿಸಿದಂತೆ ಪಡುಮಲೆ ಹಿಂಜಾವೇ ಘಟಕದ ಅಧ್ಯಕ್ಷ ಹರೀಶ್ಚಂದ್ರರನ್ನು ಸಂಪ್ಯ ಪೊಲೀಸರು ಬಂಧಿಸಿದ್ದು ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು. ಹಲವು ಹಿಂದು ಕಾರ್ಯಕರ್ತರ ಮೇಲೆ ಇದೇ ಪ್ರಕರಣದಲ್ಲಿ ಕೇಸು ದಾಖಲಿಸಿಲಾಗಿದ್ದು ಅದನ್ನು ವಾಪಸು ಪಡೆಯಬೇಕು.ಹಾಗೂ ಅಜಿತ್ ರೈಯವರ ಹೇಳಿಕೆ ಪಡೆಯಬೇಕು. ಇಲ್ಲದಿದ್ದಲ್ಲಿ ಜ. 2ರ ಮೊದಲು ಪುತ್ತೂರು ಬಂದ್‍ಗೆ ಕರೆ ನೀಡಿ ಸಂಪ್ಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಹಿಂದು ಸಮಾಜವನ್ನು ದಮನಿಸುವ ಇಲಾಖೆಯ ವಿರುದ್ಧ ಯಾವುದೇ ಸಂದರ್ಭದಲ್ಲೂ ಹೋರಾಟ ನಡೆಸಲು ಸಜ್ಜಾಗಿದ್ದೇವೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತ್ತಾಯ ಹೇಳಿದರು.
ಸಂಪ್ಯ ಠಾಣೆಯಿಂದ ಹಿಂದು ಸಮಾಜಕ್ಕೆ ನಿರಂತರ ಅವಮಾನ:
ಸಂಪ್ಯ ಠಾಣೆಯಿಂದ ಹಿಂದು ಸಮಾಜಕ್ಕೆ ನಿರಂತರ ಅವಮಾನ ಮಾಡಲಾಗುತ್ತಿದೆ. ಇಂತಹ ಹಿಂದು ವಿರೋಧಿ ಧೋರಣೆಯನ್ನು ನಾವು ಸಹಿಸಲು ಸಿದ್ಧರಿಲ್ಲ. ಅದಕ್ಕಾಗಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದೇವೆ ಎಂದರು. ಹಿಂದು ವಿರೋಧಿ ಮಾನಸಿಕತೆಯ ಧೋರಣೆ ಹೊಂದಿರುವ ಪುತ್ತೂರು ಗ್ರಾಮಾಂತರ ಠಾಣೆಯ ಎಸ್‍ಐ ಹಾಗೂ ಸಿಬಂದಿಗಳು ಹಿಂದು ವಿರೋಧಿ ಕೆಲಸ ಮಾಡುವವರಿಗೆ ಬೆಂಬಲ ನೀಡುತ್ತಿದ್ದು, ಹಿಂದು ಸಂಘಟನೆಗಳ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಗೋಕಳ್ಳ ಸಾಗಾಟ,ಜ ಮತಾಂತರ, ಲವ್‍ಜಿಹಾದ್‍ನಂತಹ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡಲಾಗುತ್ತಿದೆ. ಅದನ್ನು ಪ್ರತಿಭಟಿಸುವ ಮೂಲಕ ದೂರು ನೀಡುವ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆಯೇಜ ಪ್ರತಿ ದೂರು ದಾಖಲಾಗುತ್ತದೆ. ಕಳೆದ 2 ವರ್ಷಗಳಿಂದ ನಿರಂತರವಾಗಿ ಹಿಂದು ಸಮಾಜವನ್ನು ದಮನಿಸುವ ಕಾರ್ಯ ಸಂಪ್ಯ ಠಾಣೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಜಯಂತ ಬೆಳ್ಳಾರೆ, ತಾಲೂಕು ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ವಿಟ್ಲ ತಾಲೂಕು ಪ್ರಧಾನ ಕಾರ್ಯದರ್ಶಿ ಗಣರಾಜ ಭಟ್ ತೆಂಕಿಲ, ಪುತ್ತೂರು ನಗರ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.