Tuesday, January 21, 2025
ಸುದ್ದಿ

ಮಂಗಳೂರಲ್ಲಿ ಜೂನ್ 8ರಂದು ಮುಂಗಾರು – ಕಹಳೆ ನ್ಯೂಸ್

ಕೇರಳಕ್ಕೆ ಮುಂಗಾರು ಪ್ರವೇಶ ಇನ್ನೂ ಒಂದು ದಿನ ತಡವಾಗಲಿದೆ ಎಂದು ನೈರುತ್ಯ ಮಾರುತವು ದೇವರ ನಾಡನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆಯನ್ನು ನೀಡಿದೆ. ಬುಧವಾರದಿಂದ ನೈರುತ್ಯ ಮುಂಗಾರು ಚುರುಕಾಗಲಿದೆ ಶುಕ್ರವಾರ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಇಲಾಖೆ ತಿಳಿಸಿದೆ. ಮುಂಗಾರು ಪ್ರವೇಶಿಸಲಿವೆ ಎಂದಿದ್ದ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಕಳೆದ ವಾರವಷ್ಟೇ 7 ಎಂದು ದಿನಾಂಕ ಬದಲಿಸಿತ್ತು. ಕರ್ನಾಟಕಕ್ಕೆ ಜೂನ್ ಎಂಟರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಇದು ಮುಂದುವರೆಯಲಿದ್ದು, ಜಿಲ್ಲೆಗೆ 8 ರಂದು ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯ ಭವಿಷ್ಯ ನಿಜಾನೋ ಸುಳ್ಳೋ ಏನೆಂಬುವುದು ಕಾದುನೋಡಬೇಕಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು