Monday, January 20, 2025
ಸಿನಿಮಾಸುದ್ದಿ

ಮಂಗಳೂರಿನಲ್ಲಿ ಕಾಳಗಕ್ಕೆ ರೆಡಿಯಾದ ‘ರಾಬರ್ಟ್’ – ಕಹಳೆ ನ್ಯೂಸ್

ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ, ಬಹುಕೋಟಿ ಬಜೆಟ್‍ನ ಅದ್ಧೂರಿ ಚಿತ್ರ ‘ರಾಬರ್ಟ್’. ಚಿತ್ರದ ಶೂಟಿಂಗ್ ಈಗಾಗಲೇ ಭರದಿಂದ ಸಾಗುತ್ತಿದ್ದು, ರಂಜಾನ್ ಪ್ರಯುಕ್ತ ಥೀಮ್ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ.

ಜಾಹೀರಾತು
ಜಾಹೀರಾತು
ಜಾಹೀರಾತು

ದರ್ಶನ್ ಇಲ್ಲಿ ಹಿಂದೆಂದೂ ಹಾಕಿರದ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಅಂಶವು ಈ ಒಂದು ಥೀಮ್ ಪೋಸ್ಟರ್‍ನಿಂದ ನಮಗೆ ಮನದಟ್ಟಾಗುತ್ತದೆ. ದರ್ಶನ್ ಲಾಂಗ್ ಹೇರ್ ಬಿಟ್ಟು, ಕಾಸ್ಟ್ಲೀ  ಬೈಕೇರಿ ಕುಳಿತಿರುವ ಭಂಗಿ ಸೂಪರ್ಬ್. ಇನ್ನು ನಿರ್ದೇಶಕ ತರುಣ್ ಸುಧೀರ್ ಹೇಳಿ ಕೇಳಿ ದರ್ಶನ್ ಫ್ಯಾನ್. ಹಾಗಿರುವಾಗ ಚಿತ್ರದುದ್ದಕ್ಕೂ ಫ್ಯಾನ್ ಸ್ಟಫ್ ಇರುವುದಂತೂ ಖಚಿತ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವತ್ತು ರಿಲೀಸ್ ಆಗಿರುವ ಥೀಮ್ ಪೋಸ್ಟರ್‍ ನಲ್ಲಿ ದರ್ಶನ್ ಧರಿಸಿರುವ ಜಾಕೆಟ್ ಮೇಲೆ ಗಜ ಸಂಕೇತವಿದೆ, ಜೊತೆಗೆ ದರ್ಶನ ಬೈಕ್ ನಂಬರ್ ಪ್ಲೇಟ್‍ನಲ್ಲಿ ಕೆಎ 19 ಡಿ ಬಾಸ್ ಎಂದಿದೆ.

ಇದರಲ್ಲಿ ನಾವು ಗಮನಿಸಬೇಕಾದ ಸಂಗತಿಯೇನೆಂದರೆ ಕೆಎ 19 ಎಂಬುದು ಮಂಗಳೂರು ಆರ್‍ಟಿಓ ಸಂಖ್ಯೆ. ಹಾಗಾಗಿ ರಾಬರ್ಟ್ ಕಥೆಯು ಮಂಗಳೂರಿನಲ್ಲಿ ನಡೆಯುತ್ತಾ ಎಂದು ಕಾದು ನೋಡಬೇಕಿದೆ.