Tuesday, January 21, 2025
ಸುದ್ದಿ

ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರು ಮಾಂಸ ಮಾರಾಟಕ್ಕೆ ಪೊಲೀಸರು ದಾಳಿ – ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಮಿತ್ತೇರಿ ಪಾದೆ ಎಂಬಲ್ಲಿ ಸುಲೈಮಾನ್ ಎಂಬುವವರ ವಾಸ್ತವ್ಯವಿರದ ಮನೆಯ ಬಲ ಬದಿಯಲ್ಲಿರುವ ತಗಡು ಸೀಟಿನ ಶೆಡ್‍ನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರುವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್‍ಐ ಸುನೀತಾ ಕೆ ಆರ್ ಮತ್ತು ಪೊಲೀಸ್ ಸಿಬ್ಬಂದಿಗಳು ದಾಳಿಯನ್ನು ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಜಾನುವಾರುವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಸಿದ್ಧವಿದ್ದವರು ಓಡಿಹೋಗಿದ್ದಾರೆ. ಸ್ಥಳದಲ್ಲಿದ್ದ 70 ಕೆ ಜಿ ಯಷ್ಟು ಜಾನುವಾರಿನ ಮಾಂಸ, ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆ ಹಾಗೂ ಸಾಗಾಟಕ್ಕೆ ಬಳಸುವ ಕೆ ಎ- 21-ಬಿ-4033 ಟಾಟಾ ಎಸಿ ವಾಹನ-1, ಕೆ ಎ-21 ಎಸ್ 6902ನೇ, ಕೆ ಎ 21 ಆರ್ 9372 ಹೀರೋ ಹೊಂಡಾ ಸ್ಪೆಂಡರ್ ಬೈಕ್-1 , ಕೆ ಎ 01 ಯು 8665 ನೇ ಕ್ಯಾಲಿಬರ್ ಬೈಕ್-1, ಹೋಂಡಾ ಡಿಯೋ ದ್ವಿಚಕ್ರ ವಾಹನ -1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಅ.ಕ್ರ 52/2019 ಕಲಂ: 4.5.8.11 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ ಮತ್ತು 11(1)(ಡಿ)ಪ್ರಾಣಿ ಹಿಂಸೆ ತಡೆ ಕಾಯ್ದೆ ಅನ್ವಯ ಕೇಸ್ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು