Tuesday, January 21, 2025
ಸುದ್ದಿ

ಚೆಕ್‌ಪಾಯಿಂಟ್‌ ಬಳಿ ಗಾಂಜಾ ಕಳೆದುಕೊಂಡಿದ್ದೀರಾ? ಚಿಂತೆ ಬೇಡ: ಪೊಲೀಸರು ಟ್ವೀಟರ್‌ನಲ್ಲಿ ತಮಾಷೆ ಟ್ವೀಟ್‌ – ಕಹಳೆ ನ್ಯೂಸ್

ಗುವಾಹಟಿ: ಬರೋಬ್ಬರಿ 590 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವ ಅಸ್ಸಾಂ ಪೊಲೀಸರು ಆ ವಿಚಾರವನ್ನು ಅತ್ಯಂತ ತಮಾಷೆಯಾಗಿ ಜನರಿಗೆ ಹೇಳಿರುವುದು ಟ್ವೀಟರ್‌ನಲ್ಲಿ ಭಾರಿ ವೈರಲ್‌ ಆಗಿದೆ. ಕರ್ತವ್ಯದ ಒತ್ತಡದಲ್ಲಿ ಸಿಡುಕು ಸ್ವಭಾವ ತೋರುವ ಪೊಲೀಸರ ಹಾಸ್ಯಪ್ರಜ್ಞೆ ಮೆಚ್ಚುಗೆಗೂ ಪಾತ್ರವಾಗಿದೆ.

‘ಯಾರಾದರೂ ಭಾರಿ ಪ್ರಮಾಣದ (590 ಕೆ.ಜಿ.) ಗಾಂಜಾ ಹಾಗೂ ಒಂದು ಟ್ರಕ್‌ ಅನ್ನು ಚಾಗೋಲಿಯಾ ಚೆಕ್‌ಪಾಯಿಂಟ್‌ ಬಳಿ ನಿನ್ನೆ ರಾತ್ರಿ ಕಳೆದುಕೊಂಡಿದ್ದೀರಾ? ಚಿಂತೆ ಬೇಡ, ನಾವು ಪತ್ತೆ ಹಚ್ಚಿದ್ದೇವೆ. ಧೂಬ್ರಿ ಪೊಲೀಸರ ಜತೆ ಸಂಪರ್ಕದಲ್ಲಿರಿ. ಅವರು ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತಾರೆ 🙂 ಗ್ರೇಟ್‌ ಜಾಬ್‌ ಟೀಮ್‌ ಧೂಬ್ರಿ’ ಎಂದು ಇಮೋಜಿ ಹಾಗೂ ಸ್ಮೈಲಿ ಸಹಿತ ಅಸ್ಸಾಂ ಪೊಲೀಸರು ಬುಧವಾರ ಟ್ವೀಟ್‌ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸ್‌ ಭಾಷೆಯಲ್ಲೇ ಜಪ್ತಿಯಾದ ವಸ್ತುಗಳನ್ನು ತಿಳಿಸುತ್ತಿದ್ದ ಅಸ್ಸಾಂ ಪೊಲೀಸರು ತಮಾಷೆಯಾಗಿ ತಮ್ಮ ಕಾರ್ಯಾಚರಣೆಯನ್ನು ತಿಳಿಸಿರುವುದು ಟ್ವೀಟರ್‌ ಬಳಕೆದಾರರ ಮೆಚ್ಚುಗೆಗೆ ಕಾರಣವಾಗಿದೆ. ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾಸೇರಿ 1200 ಮಂದಿ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. 16800 ಮಂದಿ ಲೈಕ್‌ ಮಾಡಿದ್ದರೆ, 6000 ಬಾರಿ ಇದು ರೀಟ್ವೀಟ್‌ ಆಗಿದೆ.