ಬೆಳ್ಳಿ ಬೆಟ್ಟದ ಮೇಲೆ
ಬೆಳಂದಿಗಳಿನ ಬಾಲೆ
ಹೊಳೆಯುತಿಹ ಚಂದಿರ
ಕಾಣುತೆ ಸುಂದರ
ಎತ್ತಿ ಮುದ್ದಾಡಿಸುವೆ
ನಾ ಹೊತ್ತು ಕುಣಿಸುವೆ
ತುತ್ತನ್ನ ಮಲಗಿಸುವೆ
ನಾ ತೂಗಿ ಮಲಗಿಸುವೆ
ಜೋಗುಳವ ಹಾಡುತಲಿ
ಕಥೆಗಳನು ಹೇಳುತಲಿ
ಕೂಡಿ ಆಡುವ ಜತೆಗೆ
ಇಳಿದು ಬಾರೆಯ ಇಳೆಗೆ
ಕಲ್ಪನೆಯ ಕೂಸಲ್ಲ
ಕಂಬಳಿಯ ಹಾಸಿಲ್ಲ
ಮಂದಹಾಸದ ನಗುವು
ನಿನ್ನಿಂದ ಈ ಜಗವು
ಕುಣಿದಂತೆ ಕುಣಿಯುವ
ಬೆಳಗಿದರೆ ಬೆಳಗುವ
ಬೆಳದಿಂಗಳಿನ ಬಾಲೆ
ಏನು ನಿನ್ನಯ ಲೀಲೆ
ಹೊನ್ನ ಬಟ್ಟಲ ನಡುವೆ
ಕಡೆದ ಬೆಣ್ಣೆಯ ಮುದ್ದೆ
ಸರೋವರದ ಮಾನನಿದಿ
ಅರಳಿರುವ ತಾವರೆಯೆ
ಕವಿಯ ಕಲ್ಪನೆ ಸಹಜ
ಬೆಳಗಿರುವ ರವಿ ತೇಜ
ಬಾಲಭಾಸ್ಕರ ನಿತ್ಯ
ಜಗವ ಬೆಳಗು ಸತ್ಯ