Friday, November 15, 2024
ಅಂಕಣ

ಕವಯತ್ರಿ ಶಾಂತ ಕುಂಟಿನಿಯವರ ಸಾಕ್ಷಾತ್ಕಾರ ಕವನಗಳ ಸರಣಿ ; ಪರಮಾತ್ಮ-ಚಂದಿರ

ಎನ್ನೊಳಗಿರುವ ಪರಮಾತ್ಮ ಚಂದಿರನಂತೆ ಹೊಳೆತ
ಹೊಳೆದು ಹೊಳೆದು ಎನ್ನನ್ನು ಅವನೊಳಗಿನ ಬೆಳಕಲಿ ಇಡುತ

ಮುಳುಗಿದ ಬೆಳಕಿಗೆ ಇನ್ನೇನು?ಹಾಲು ಬೆಳಕಿನ ಅಂಗಳದಲ್ಲಿ
ಎನಗು ಅವಗು ನಡುವೆ
ಎನ್ನನ್ನು ನೋಡುತ ಕುಳಿತೇ ಇದ್ದ
ಬಿಟ್ಟ ಕಣ್ಣ ಬಿಡದೇ

ಜಾಹೀರಾತು
ಜಾಹೀರಾತು
ಜಾಹೀರಾತು

ಎನ್ನನು ನೋಡುವ ಭರದಲಿ
ಅವನು ಎನ್ನ ಒಳಗೇ ಕುಳಿತ
ರಕ್ಕಸತನದಿ ಕೊರೆವ ಅಹಂಕಾರಕೆ
ಬಂದು ಬೈಯುತ ಬೆವೆತ

ಜಾಹೀರಾತು
ಜಾಹೀರಾತು
ಜಾಹೀರಾತು

ಎನ್ನನು ಮುಟ್ಟಿ ಬಂದು ಅವನು
ಅವನದು ಎಲ್ಲವ ಮರೆತ
ಮರೆತು ಮರೆತು ಎನ್ನೊಡಲಲಿ
ನಿಲ್ಲದೆ ಕೂರದೆ ಜಿಗಿತ

ಅವನನು ನಾನು ಮರೆತು ಹೋದರೆ
ಎನಗು ಅವಗು ಸ್ಥಗಿತ
ಹೆಚ್ಚೆಂದರೆ ಅವಗೆ ನಾನು
ಮುಟ್ಟಲು ಬಿಟ್ಟೆ ಮುಗಿತ

ಎನಗು ಅವಗು ಮುದ್ದಿನ ಮಾತಲಿ
ಮಿಂಚಿನ ಕಣ್ಣಿನ ಮಿಡಿತ
ಕೊರೆದು ಕೊರೆದು ಸುಸ್ತಾಗವನು
ಒಳಗಿನ ಸ್ವರದಲಿ ಕಡಿತ

Leave a Response