Sunday, January 19, 2025
ಸುದ್ದಿ

ಲವ್ ಜಿಹಾದ್ ಮಟ್ಟಹಾಕಲು ಫೀಲ್ಡ್’ಗೆ ಇಳಿಯುತ್ತಿವೆ ಹಿಂದೂ ಸಂಘಟನೆಗಳು – ವಜ್ರದೇಹಿ ಶ್ರೀ

 

Highlights
ಮೂಡಬಿದ್ರೆಯ ಪ್ರಿಯಾಂಕ ನಾಪತ್ತೆ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನ ಮಟ್ಟಹಾಕಲು ಸ್ವತಃ ಹಿಂದೂ ಸಂಘಟನೆಗಳೇ ಫೀಲ್ಡಿಗಿಳಿಯಲು ಸಜ್ಜಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು : ಮೂಡಬಿದ್ರೆಯ ಪ್ರಿಯಾಂಕ ನಾಪತ್ತೆ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನ ಮಟ್ಟಹಾಕಲು ಸ್ವತಃ ಹಿಂದೂ ಸಂಘಟನೆಗಳೇ ಫೀಲ್ಡಿಗಿಳಿಯಲು ಸಜ್ಜಾಗಿದೆ.
ಕರಾವಳಿಯ ಫೈರ್ ಬ್ರಾಂಡ್ ಸ್ವಾಮೀಜಿಯೊಬ್ಬರು ಹಿಂದೂ ಟಾಸ್ಕ್ ಫೋರ್ಸ್ ಅನ್ನೋ ಸೇನೆಯನ್ನ ಹುಟ್ಟು ಹಾಕಲು ಮುಂದೆ ಬಂದಿದ್ದಾರೆ. ಅದರಂತೆ ಸೇನೆ ಹುಟ್ಟು ಹಾಕುವ ಎಲ್ಲಾ ಸಿದ್ಧತೆ ಮುಗಿದಿದ್ದು, ಇನ್ನೆರಡು ವಾರಗಳಲ್ಲಿ ಲವ್ ಜಿಹಾದ್ ವಿರುದ್ದ ಸೇನೆ ತೊಡೆ ತಟ್ಟಲು ಸಜ್ಜಾಗಲಿದೆ. ಮೊದಲಿಗೆ ಕೇವಲ ದ.ಕ ಜಿಲ್ಲೆಯನ್ನ ಕೇಂದ್ರೀಕರಿಸಿ ಸೇನೆ ಕೆಲಸ ಮಾಡಲಿದೆ ಎಂದು ಟಾಸ್ಕ್ ಫೋರ್ಸ್ ಹುಟ್ಟು ಹಾಕಲು ಸಜ್ಜಾಗಿರೋ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response