ವಾಷಿಂಗ್ಟನ್: ಶಸ್ತ್ರ ಸಜ್ಜಿತ ಡ್ರೋನ್ಗಳು ಹಾಗೂ ಸಮಗ್ರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಸಮ್ಮತಿಸಿದೆ.
ಭಾರತಕ್ಕೆ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಅಮೆರಿಕದ ಈ ಕ್ರಮ ಮಹತ್ವದ್ದಾಗಿದೆ. ಆದರೆ ಯಾವಾಗ ಈ ಮಾರಾಟ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಇಂತಹ ಡ್ರೋನ್ಗಳನ್ನು ಭಾರತಕ್ಕೆ ಒದಗಿಸಲು ನಿರ್ಧರಿಸಲಾಗಿದೆ. ಜತೆಗೆ, ಈಗ ಅಮೆರಿಕ ಗಾರ್ಡಿಯನ್ ಡ್ರೋನ್ಗಳ ಶಸ್ತ್ರ ಸಜ್ಜಿತ ಆವೃತ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.