ನೋಟು ಅಮಾನೀಕರಣದ ಬಳಿಕ 2016ರಲ್ಲಿ ಜಾರಿಗೆ ಬಂದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಲ್ಲಿ ಜಪಾನ್, ಯುಎಸ್ ನಂತರದ ಸ್ಥಾನವನ್ನು ಭಾರತ ದಕ್ಕಿಸಿಕೊಂಡಿದೆ. ಆರ್.ಬಿ.ಐ. ವರದಿ ಬಿಡುಗಡೆ ಮಾಡಿದ್ದು, ಹಣ ಪಡೆಯುವವರು ಮತ್ತು ಹಣ ನೀಡುವರು ಡಿಜಿಟಲ್ ಹಣ ಪಾವತಿ ವ್ಯವಸ್ಥೆ ಹೆಚ್ಚಾಗಿ ಬಳಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳ ಬಳಕೆಗೆ ಹೋಲಿಕೆ ಮಾಡಿದರೆ ರಿಟೇಲ್ ಕ್ಷೇತ್ರದಲ್ಲಿ ಶೇ.50 ರಷ್ಟು ಹೆಚ್ಚಾಗಿದೆ. ಸ್ಮಾರ್ಟ್ ಫೋನ್ ಕ್ರಾಂತಿಯಿಂದ ಡಿಜಿಟಲ್ ಪೇಮೆಂಟ್ ಬಳಕೆ ಶುರುವಾಗಿದೆ. ಇವೆರೆಡು ಒಟ್ಟಾದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಬೆಳವಣಿಗೆ ಕಂಡಿದೆ ಎಂದು ಆರ್.ಬಿ.ಐ. ತಿಳಿಸಿದೆ.
ಡಿಜಿಟಲ್ ಪೇಮೆಂಟ್ ಕ್ರಾಂತಿಯಿಂದ 3,459 ಮಿಲಿಯನ್ ಇ-ಪೇಮೆಂಟ್ ವರ್ಗಾವಣೆಗಳು ನಡೆದಿವೆ. 2017 ರ ವರದಿ ಪ್ರಕಾರ ಇ- ಪೇಮೆಂಟ್ ಅಥವಾ ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ಜಪಾನ್, ಅಮೆರಿಕಾದ ನಂತರದ ಸ್ಥಾನದಲ್ಲಿ ಭಾರತ ಇದೆ ಎಂದರು.