Recent Posts

Saturday, November 16, 2024
ಅಂಕಣ

ಹರಕೆ- ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 44

ಹರುಷ ಇಪ್ಪತ್ತಾರು ಬಡವಗೆ ಹುಡುಗಿಗಿಪ್ಪತ್ವರುಷವು
ಹರೆಯವಾದರು ಸಾಗುತಿದ್ದವು ಹರುಷದಲ್ಲಿ ಸಂಸಾರವು
ಹರೆಯದಾಸೆಗಳೊಂದು ಇಲ್ಲದೆ ಹೊಟ್ಟೆಬಟ್ಟೆಗೆ ಕುನಿಸದೆ
ಬಡವಬಡತಿಯರಿದ್ದರೊಲವಿಂದೆಣೆಯೆ ಹಕ್ಕಿಗಳಂದದೆ

ಮರುಕವೇತಕೆ ಅವಗೆ ನೆಂಟನು ಮಾಡಿದನುಚಿತವರ್ತನೆ
ಬರಿದೆ ಮನಸನು ಕೆಡಿಸಿಕೊಳ್ಳುತ ಹೆದರಿಕೊಂಡರೆ ಚಿಂತನೆ
ನರಿಯುವೊಳಿಡೆ ಸ್ವರ್ಗಲೋಕವು ಕೋಳು ಹೋಹುದೆ ಹೇಳಿರಿ
ದುರುಳ ದೊರೆಯಿವಗೆ ಕುವರನು ತಲೆಯ ಬಾಗನು ತಿಳಿಯಿರಿ

ಜಾಹೀರಾತು
ಜಾಹೀರಾತು
ಜಾಹೀರಾತು

ದೂರನಿವನೂರನ್ನು ಕೂಡಲೆ ಹೋಗಿ ತೇರೆವುದೆ ಮರುಕದಿ
ದೂರದೂರನು ಸೇರಿ ಮರ್ಯಾದೆಯಲಿ ಜೀವಿಸೆ ಜತನದಿ
ಊರಿನರಸಂಗಾವ ಬರವಿದೆ ಯಾರನಾದರು ಕರೆಸಲಿ
ಭೂರಿಸಂತಸದಿಂದ ಹರಕೆಯ ಭೂತಕೋಲವ ನಡೆಸಲಿ

ಜಾಹೀರಾತು
ಜಾಹೀರಾತು
ಜಾಹೀರಾತು

ಎನ್ನ ಮನ ಮಿಡಿಯುತಿದೆ ಕೇಳಲು ಇತ್ತು ಇರಿಸಿದ ಪ್ರೀತಿಯ
ಸಾಗಿ ಭಯದಲಿ ಏರಿ ಗುಡ್ಡವು ಜರಿದು ಬೀಳುವ ಭೀತಿಯ
ಬಿರಿದ ಹೂ ಬಿಳಿ ನಗುವೇಗದ ತರಳೆಯಾ ಮಲ್ಲಿಗೆಯ ಗುಣವು
ನಂಬದಿರು ನೀ ಜಾಣ ಎಂದಿಗೂ ಬೂದಿ ಮುಚ್ಚಿದ ಕೆಂಡವು

ಬಂದಿಯಾಗಿಹೆನೀಗ ಕತ್ತರಿಯೊಳಗಿನಡಕೆಯ ತೆರದಲಿ
ಭಾರಿಸಂತೋಷದಲಿ ಭಯಕೆಯ ನೇಮನಿಯಮ ನಡೆಸಲಿ
ಮನದಿ ಯೋಚಿಸುತಿಹೆನು ಕಾಣದೆ ಹುಡುಕುತಿಹೆಯಾ ದಾರಿಯಾ
ಎನಗೆ ತೋರುವುದೆಂದು ಪ್ರಾರ್ಥಿಸುತಿರುವೆಯಾನು ಚಾಮುಂಡಿಯಾ

Leave a Response