ಪುತ್ತೂರು: ಕಾಸರಗೋಡಿನ ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳದಲ್ಲಿ ಪ್ರಸ್ತುತ ವರ್ಷದಿಂದ ಎಂ.ಎ ಕನ್ನಡ ವಿಷಯ ಆರಂಭಗೊಳ್ಳಲಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಐಚ್ಚಿಕ ಅಥವ ಭಾಷಾ ಕನ್ನಡ ವಿಷಯ ಸಹಿತವಾಗಿ ಕನಿಷ್ಟ 50 ಶೇಕಡಾ ಅಂಕದೊಂದಿಗೆ ಪದವಿ ಪಡೆದ ಯಾವುದೇ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು. ಎಸ್.ಸಿ ಹಾಗೂ ಎಸ್‍ಟಿ ಅಭ್ಯರ್ಥಿಗಳಿಗೆ ಶೇಕಡಾ 5ರವರೆಗೆ ಅಂಕಗಳಲ್ಲಿ ಸಡಿಲತೆಯಿರುತ್ತದೆ.
ಒಟ್ಟು 50 ಅಭ್ಯರ್ಥಿಗಳಿಗೆ ಅವಕಾಶವಿದ್ದು, ಅರ್ಹತಾ ಪರೀಕ್ಷೆಯ ಮೂಲಕ ಸರ್ಕಾರಿ ಮೀಸಲಾತಿ ನಿಯಮದನ್ವಯ ಸೀಟು ಹಂಚಿಕೆ ನಡೆಯಲಿದೆ. ಅದಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಜೂನ್.16ರಿಂದ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆ, ಶುಲ್ಕ, ಪ್ರವೇಶ ಪರೀಕ್ಷಾ ದಿನಾಂಕ, ಪರೀಕ್ಷಾ ಕೇಂದ್ರವೇ ಮೊದಲಾದ ಮೊದಲಾದ ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾನಿಲಯದ www.cukerala.ac.in ಹಾಗೂ https://oas.cukerala.ac.in ವೆಬ್‍ಸೈಟ್‍ನಲ್ಲಿ ಪಡೆಯಬಹುದು.