ಚಿಕ್ಕಬಳ್ಳಾಪುರ: ಇಲ್ಲಿಗೆ ಸಮೀಪದ ತಿಪ್ಪೇನಹಳ್ಳಿಯಲ್ಲಿ ಬಟ್ಟೆ ತೊಳೆಯಲೆಂದು ಮಕ್ಕಳೊಂದಿಗೆ ಬಾವಿಯ ಬಳಿ ಹೋಗಿದ್ದ ತಾಯಿ ತನ್ನಿಬ್ಬರು ಮಕ್ಕಳನ್ನೂ ಕಳೆದುಕೊಂಡು, ತಾನೂ ಮೃತಪಟ್ಟಿದ್ದಾರೆ.
ವಿಜಯಲಕ್ಷ್ಮೀ (30), ಅವರ ಮಕ್ಕಳಾದ ಅಜಯ್ (10) ಹಾಗೂ ಐಶ್ವರ್ಯ (8) ಮೃತರು. ವಿಜಯಲಕ್ಷ್ಮೀ ಬಟ್ಟೆ ತೊಳೆಯಲು ತನ್ನಿಬ್ಬರು ಮಕ್ಕಳೊಂದಿಗೆ ಳೊಂದಿಗೆ ಬಾವಿ ಬಳಿಗೆ ತೆರಳಿದ್ದರು. ಮಕ್ಕಳು ಆಟವಾಡುತ್ತ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ.
ಇಬ್ಬರೂ ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಅವರನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ. ಆದರೆ ಮೇಲೆ ಬರಲಾಗದೆ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.