Recent Posts

Sunday, January 19, 2025
ಸುದ್ದಿ

ಬೆಂಗಳೂರಿನಲ್ಲಿ ಆರತಕ್ಷತೆಗೆ ಸಜ್ಜಾದ್ರು ಜಾಕಿ ಭಾವನಾ -ನವೀನ್

 

ಬಹುಭಾಷಾ ನಟಿ ಭಾವನಾ ಮದುವೆ ದಿನಾಂಕ ನಿಗಧಿ ಆಗಿದೆ. ಗಾಸಿಪ್ ಗಳ ಪ್ರಕಾರ ಭಾವನಾ ಮದುವೆ ಆಗಿ ಮೂರು ದಿನಗಳು ಕಳೆಯಬೇಕಿತ್ತು. ಆದರೆ ಭಾವನಾ ಅವರ ಮದುವೆಯ ಡೇಟ್ ಇರುವ ಲಗ್ನಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಮಾರ್ಚ್ ನಲ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವನಾ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕನ್ನಡ ಸಿನಿಮಾ ನಿರ್ಮಾಪಕ, ನಟ ನವೀನ್ ಅವರ ಜೊತೆ ಭಾವನಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಒಂದು ತಿಂಗಳಷ್ಟೇ ಮದುವೆ ಸಮಾರಂಭಕ್ಕೆ ಬಾಕಿ ಇದ್ದು ಕೇರಳದ ಅಭಿಮಾನಿಗಳ ಜೊತೆಗೆ ಬೆಂಗಳೂರಿನ ಫ್ಯಾನ್ಸ್ ಗಳಿಗೂ ಭಾವನಾ ಹಾಗೂ ನವೀನ್ ಜೋಡಿಯನ್ನ ನೋಡಿ ಶುಭ ಹಾರೈಸುವ ಅವಕಾಶ ಸಿಗುತ್ತಿದೆ.

ಜನವರಿ 22ರಂದು ಭಾವನಾ ಮದುವೆ

ಕನ್ನಡ,ತೆಲುಗು, ತಮಿಳು ಹಾಗೂ ಮಲೆಯಾಳಂ ನ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿ ಗಳಿಸಿರುವ ನಟಿ ಭಾವನಾ. ಜನವರಿ 22 ರಂದು ಕನ್ನಡದ ನಟ, ನಿರ್ಮಾಪಕ ನವೀನ್ ಜೊತೆಯಲ್ಲಿ ಭಾವನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕೇರಳದಲ್ಲಿ ಮದುವೆ ಸಂಭ್ರಮ

ಜನವರಿ 22 ರಂದು ಕೇರಳದ ತ್ರಿಶೂರ್ ನಲ್ಲಿರುವ ಲೂಲು ಕನ್ವೇಷನ್ ಹಾಲ್ ನಲ್ಲಿ ಮದುವೆಯ ಮಹೂರ್ತ ಸಮಾರಂಭ ನಡೆಯಲಿದೆ. ಭಾವನಾ ಅವರ ಸಂಬಂದಿಕರು ಹಾಗೂ ನವೀನ್ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

ಬೆಂಗಳೂರಿನಲ್ಲಿ ಆರತಕ್ಷತೆ

‘ಜಾಕಿ’ ಸಿನಿಮಾದಿಂದ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಪ್ರಯಾಣ ಪ್ರಾರಂಭ ಮಾಡಿದ ನಟಿ ಭಾವನಾ ಕನ್ನಡ ಚಿತ್ರದಲ್ಲೂ ಗುರುತಿಸಿಕೊಂಡಿರುವ ನಟಿ. ನವೀನ್ ಬೆಂಗಳೂರು ಮೂಲದವರು ಆಗಿರುವುದರಿಂದ ಬೆಂಗಳೂರಿನಲ್ಲಿ ಆರತಕ್ಷತೆಗೆ ಪ್ಲಾನ್ ಮಾಡಲಾಗಿದೆ.

ಆರತಕ್ಷತೆಗೆ ಬಂದಾಯ್ತು ಆಮಂತ್ರಣ
ಫೆಬ್ರವರಿ 4 ರಂದು ಬೆಂಗಳೂರಿನಲ್ಲಿ ಭಾವನಾ ಹಾಗೂ ನವೀನ್ ಆರತಕ್ಷತೆ ನಡೆಯಲಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ಗಳು ರಿಸೆಪ್ಷನ್ ನಲ್ಲಿ ಭಾಗಿಯಾಗಲಿದ್ದು ಆರತಕ್ಷತೆ ನಡೆಯುವ ಸ್ಥಳವನ್ನ ಮಾತ್ರ ಇನ್ನೂ ಬಿಟ್ಟುಕೊಟ್ಟಿಲ್ಲ.

Leave a Response