Recent Posts

Tuesday, January 21, 2025
ಸುದ್ದಿ

ಮಯೂರ ಸಾಂಸ್ಕೃತಿಕ ಕಲಾ ಕೇಂದ್ರ’ ಉದ್ಘಾಟನೆ – ಕಹಳೆ ನ್ಯೂಸ್

ಕಡಬ: ಅಲಂಕಾರಿನಲ್ಲಿ ಯಕ್ಷಗಾನ ಮತ್ತು ಇತರ ನೃತ್ಯ ತರಬೇತಿ ‘ಮಯೂರ ಸಾಂಸ್ಕೃತಿಕ ಕಲಾ ಕೇಂದ್ರ’ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭವನ್ನು ಮೇಘ ಕಲಾ ಆರ್ಟ್ಸ್ ನೃತ್ಯ ಶಿಕ್ಷಕಿ ಶಾರದಾ ದಾಮೋದರ್ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೈಹಿಕವಾಗಿಯೂ, ಮಾನಸಿಕವಾಗಿಯೂ ಲವಲವಿಕೆಯಿಂದಿರಲು ಯಕ್ಷಗಾನ ಮತ್ತು ಇತರ ನೃತ್ಯ ತರಬೇತಿ ಪಡೆಯಬೇಕು. ಈ ಸಂಸ್ಥೆ ತುಂಬಾ ಎತ್ತರಕ್ಕೆ ಬೆಳೆಯಲಿ ಎಂದು ಹಾಗೂ ಸದಾ ಕಲಾವಿದನ ಸೇವೆಗಾಗಿ, ಕಲೆಯ ಉಳಿವಿಗಾಗಿ ಮುಡಿಪಾಗಿರಲಿ ಎಂದು ಶಾರದಾ ದಾಮೋದರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಸಂಸ್ಥೆಯ ನೃತ್ಯ ನಿರ್ದೇಶಕ ಹಾಗೂ ಯಕ್ಷಗಾನ ನೃತ್ಯ ಕಲಾವಿದ (ದೈವ ನರ್ತಕ) ಮೋಹನ್ ಕುಮಾರ್ ಶರವೂರು ಆಲಂಕಾರು ನಿರೂಪಿಸಿದರು. ಈ ವೇಳೆ ನೃತ್ಯ ತರಬೇತಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನೃತ್ಯ ಶಿಕ್ಷಕಿ ಕುಮಾರಿ ದೀಕ್ಷಾ ಪಿ.ಕೆ ಹಾಗೂ ಜಯಂತಿ ಮತ್ತಿತ್ತರರು ಉಪಸ್ಥಿತರಿದ್ದರು.