Tuesday, January 21, 2025
ಸುದ್ದಿ

ಮಳೆಗಾಲ ಹತ್ತಿರ ಬಂದರು ಉಪ್ಪಿನಂಗಡಿಯ ಚರಂಡಿ ಸಮಸ್ಯೆಗಿಲ್ಲ ಮುಕ್ತಿ – ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ಎರಡನೇ ಅತೀ ದೊಡ್ಡ ನಗರವಾದ ಉಪ್ಪಿನಂಗಡಿ ಪರಿಸರದ ಬೈಪಾಸ್, ರಾಜಧಾನಿ ಟವರ್ಸ್, ಎಸ್‍ಎಲ್‍ಎನ್ ಕಾಂಪ್ಲೆಕ್ಸ್ ಸಹಿತ ಉಪ್ಪಿನಂಗಡಿ ಮಾದರಿ ಶಾಲಾ ರಸ್ತೆ ಬಳಿಯ ಕಲುಷಿತ ನೀರು ಹರಿದು ಹೋಗುವ ಚರಂಡಿ ಹೂಳು ತುಂಬಿ ಕೊಳಚೆ ನೀರಿನ ಹರಿವಿಗೆ ತೊಡಕಾಗಿದೆ. ಇದು ಮಾರಕ ರೋಗಗಳ ಉತ್ಪತ್ತಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆಗಾಲ ಆರಂಭವಾಯಿತೆಂದರೆ ಸಾಂಕ್ರಾಮಿಕ ರೋಗಗಳ ಹಾವಳಿ ಜೋರಾಗುತ್ತದೆ. ಮುಂಗಾರು ಆರಂಭದ ಮೊದಲೇ ಕೆಲ ಭಾಗಗಳಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಇಂತಹ ರೋಗಗಳ ಹರಡುವಿಕೆಗೆ ಮೂಲ ಕಾರಣ ತಗ್ಗು ಪ್ರದೇಶಗಳಲ್ಲಿ ನಿಲ್ಲುವ ಕೊಳಚೆ ನೀರುಗಳು, ಚರಂಡಿ ನೀರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಪ್ಪಿನಂಗಡಿ ನಗರದ ಹೃದಯ ಭಾಗದಲ್ಲೇ ದಿನನಿತ್ಯ ಸಾವಿರಾರು ಮಂದಿ ಸಂಚರಿಸುವ ರಸ್ತೆ ಪಕ್ಕದಲ್ಲೆ ಕೊಳಚೆ ನೀರು ಗಬ್ಬೆದ್ದು ನಾರುತ್ತಿದೆ. ಮಾರಕ ರೋಗಗಳಿಗೆ ಆಸ್ಪದ ನೀಡುವ ಚರಂಡಿಯ ನೀರನ್ನು ನಿಲ್ಲಲು ಬಿಡದೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ. ಇಲ್ಲದಿದ್ದರೆ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿ, ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ, ಅಂಗಡಿ ಮಾಲಕರಿಗೆ ತೊಂದರೆ ಆಗಲಿದೆ. ಆರೋಗ್ಯ ಇಲಾಖೆ, ಸ್ಥಳಿಯಾಡಳಿತಗಳು ಇತ್ತ ಗಮನಹರಿಸುವ ಅಗತ್ಯ ಇದೆ.