Recent Posts

Sunday, January 19, 2025
ಸುದ್ದಿ

ವಾಜಪೇಯಿ ಮನೆಗೆ ತೆರಳಿ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

 

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ ಜನ್ಮದಿನದ ಶುಭ ಕೋರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿಯ ಕೃಷ್ಣ ಮೆನನ್ ಮಾರ್ಗ್‌ನಲ್ಲಿ ಅಟಲ್ ಜೀ ಅವರ ನಿವಾಸವಿದ್ದು, ಬೆಳಿಗ್ಗೆ ಅಲ್ಲಿಗೆ ತೆರಳಿ ಮೋದಿ ಶುಭಾಶಯ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಈ ಇಬ್ಬರು ಗಣ್ಯರನ್ನು ಸ್ಮರಿಸಿದ್ದಾರೆ. ಜನಮ ದಿನದ ನಮನಗಳನ್ನು ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಟ್ವಿಟ್ ಮಾಡಿರುವ ಮೋದಿ, ‘ಅಟಲ್ ಜೀ ಅವರಿಗೆ ಜನಮದಿನದ ಶುಭ ಕಾಮನೆಗಳು. ಅವರ ದೂರದೃಷ್ಟಿತ್ವ ಮತ್ತು ನಾಯಕತ್ವ ದೇಶವನ್ನು ಅಭಿವೃದ್ಧಿಪಡಿಸಿದ್ದು ಮಾತ್ರವಲ್ಲ, ವಿಶ್ವ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಎತ್ತಿ ಹಿಡಿದಿದೆ. ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ಮತ್ತೋರ್ವ ದೇಶಪ್ರೇಮಿ ಮದನ್ ಮೋಹನ್ ಮಾಳವಿಯಾ ಅವರಿಗೂಜ ಜನುಮ ದಿನ ಶುಭಕೋರಿರುವ ಮೋದಿ, ‘ಮದನ್ ಮೋಹನ್ ಅವರ ಕೊಡುಗೆಗಳನ್ನು ಇಂದು ಸ್ಮರಿಸುತ್ತೇವೆ. ಭಾರತದ ಇತಿಹಾಸದ ಮೇಲೆ ಅವರ ಪ್ರಭಾವ ಅಚ್ಚಳಿಯದೆ ಉಳಿದಿದೆ. ಶಿಕ್ಷಣಕ್ಕಾಗಿನ ಹೋರಾಟ ಮತ್ತು ದೇಶಭಕ್ತಿಯನ್ನು ಸದಾ ಸ್ಮರಿಸುತ್ತೇವೆ’ ಎಂದಿದ್ದಾರೆ.

Leave a Response