Monday, January 20, 2025
ಸುದ್ದಿ

ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಬಂಟ್ವಾಳ ಮಿನಿ ವಿಧಾನ ಸೌಧದ ಲಿಪ್ಟ್ – ಕಹಳೆ ನ್ಯೂಸ್

ಬಂಟ್ವಾಳ: ಸರಕಾರಿ ಕಚೇರಿಗಳಲ್ಲಿರುವ ಸೌಲಭ್ಯಗಳನ್ನು ನಿರ್ವಹಣೆ ಮಾಡಲು ಸರಿಯಾದ ವ್ಯವಸ್ಥೆಗಳಿಲ್ಲದಾಗ ಅಗುವ ತೊಂದರೆಗಳು ಯಾವರೀತಿ ಇರುತ್ತದೆ ಎಂಬುದಕ್ಕೆ ಸಾಕ್ಷಿಯೇ ಬಿಸಿರೋಡಿನ ಮಿನಿ ವಿಧಾನ ಸೌಧ. ಹೌದು ಬಿಸಿರೋಡಿನ ಮಿನಿ ವಿಧಾನ ಸೌಧದಲ್ಲಿ ಮಹಡಿಗಳಿಗೆ ಹತ್ತಿ ಇಳಿಯಲು ಅನುಕೂಲವಾಗುವಂತೆ ಲಿಪ್ಟ್‍ನ ವ್ಯವಸ್ಥೆ ಇದ್ದರೂ ಕೂಡ ಕಳೆದ ಕೆಲ ತಿಂಗಳಿನಿಂದ ಕೆಟ್ಟು ಹೋಗಿದ್ದು, ಉಪಯೋಗಕ್ಕೆ ಬರದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ಸಾರ್ವಜನಿಕರಿಗೆ ಸಿಗುವಂತೆ ಮಾಡುವ ಉದ್ದೇಶದಿಂದ ಮಿನಿವಿಧಾನ ಸೌಧದ ಕಚೇರಿಯ ನಿರ್ಮಾಣವಾಗಿದೆಯಾದರೂ ಇಲ್ಲಿನ ಅವ್ಯವಸ್ಥೆ ಗಳ ಬಗ್ಗೆ ಮಾತ್ರ ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತೆ ಕಾಣುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲ ತಿಂಗಳಿನಿಂದ ಈ ಸೌಧದಲ್ಲಿರುವ ಲಿಪ್ಟ್ ಕೆಟ್ಟು ಹೋಗಿದ್ದರು ಇದರ ರಿಪೇರಿ ಮಾಡುವ ಕೆಲಸ ಇನ್ನೂ ಅಗಿಲ್ಲ. ವಿಕಲಚೇತನರು ಹಾಗೂ ಹಿರಿಯ ವ್ಯಕ್ತಿಗಳು ಲಿಪ್ಟ್ ಕೆಟ್ಟು ಹೋಗಿದ್ದರಿಂದ ಮೂರನೇ ಮಹಡಿವರೆಗೆ ಲಿಪ್ಟ್ ಮೂಲಕ ಹತ್ತಿಕೊಂಡು ಹೋಗುವ ದೃಶ್ಯ ಇಂದು ಕಂಡು ಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು

ದಿನಂಪ್ರತಿ ಈ ಕಚೇರಿಗೆ ಬರುವ ವಯಸ್ಸಿನ ಜನರಿಗೆ ಹಾಗೂ ವಿಕಲಾಂಗ ವ್ಯಕ್ತಿಗಳಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ಕಳೆದ ತಿಂಗಳು ವರದಿ ಮಾಡಲಾಗಿತ್ತು. ಆದರೆ ಈ ಸಮಸ್ಯೆ ಯ ಬಗ್ಗೆ ಗಂಭೀರ ವಾಗಿ ಪರಿಗಣಿಸದೆ ಸಾರ್ವಜನಿಕ ರಿಗೆ ತೊಂದರೆ ಯಾಗುತ್ತಿದೆ ಎಂದು ಮಹಮ್ಮದ್ ನಂದಾವರ ಆರೋಪ ವ್ಯಕ್ತಪಡಿಸಿದ್ದಾರೆ.