ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷ: ಕುಲದೀಪ್ ಜಿ, ಕಾರ್ಯದರ್ಶಿ: ಅಧೀಕ್ಷಾ, ಜೊತೆ ಕಾರ್ಯದರ್ಶಿ: ಪಿ.ದಿಶಾ ರೈ – ಕಹಳೆ ನ್ಯೂಸ್
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನ 2019-20ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಚಟುವಟಿಕೆಗಳ ರೂಪುರೇಷೆಗಳಿಗಾಗಿ ವಿದ್ಯಾರ್ಥಿ ಸಂಘವು ರಚನೆಗೊಂಡಿತು.
ಜೂನ್ 10 ಸೋಮವಾರದಂದು ವಿದ್ಯಾರ್ಥಿಗಳು ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಕುಲದೀಪ್ ಜಿ. ಆಯ್ಕೆಯಾದರು. ಕಾರ್ಯಾದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಅಧೀಕ್ಷಾ ಮತ್ತು ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಪಿ. ದಿಶಾ ರೈ ಆಯ್ಕೆಗೊಂಡರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಪಿ. ವಿ. ಗೋಕುಲ್‍ನಾಥ್ ಆದೇಶದಂತೆ ವಿವಿಧ ವಿದ್ಯಾರ್ಥಿಪರ ಮತ್ತು ಸಂಸ್ಕೃತಿಯ ಉಳಿಕೆಯನ್ನು ಭವಿಷ್ಯದಲ್ಲಿಟ್ಟುಕೊಂಡು ಕೆಲವು ಸಮಿತಿಗಳನ್ನು ರಚಿಸಲಾಯಿತು.
ಗಣೇಶೋತ್ಸವ ಸಮಿತಿ: ವರ್ಷಂಪ್ರತಿ ಸಂಸ್ಥೆಯ ವತಿಯಿಂದ ಅದ್ದೂರಿಯಾಗಿ ನಡೆಯುವ ಗಣೇಶೋತ್ಸವ ಹಬ್ಬದ ಉಸ್ತುವಾರಿಯಾಗಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಶಮನ್ ಜಿ. ಅಧ್ಯಕ್ಷರಾಗಿ ಆಯ್ಕೆಗೊಂಡರು. ಸದಸ್ಯರುಗಳಾಗಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಪವನ್‍ರಾಜ್, ಹರ್ಷ ಶೆಟ್ಟಿ, ಭವಿಷ್, ವರ್ಷಿತ್ ರೈ ಹಾಗೂ ಕಲಾ ವಿಭಾಗದ ಸನತ್ ಆಯ್ಕೆಗೊಂಡರು.
ಸ್ವಚ್ಛ ವಿದ್ಯಾಲಯ ಸಮಿತಿ: ಸ್ವಚ್ಚ ಮತ್ತು ಸ್ವಸ್ಥ ಮನಸ್ಸು ಎಂಬ ಧ್ಯೇಯದೊಂದಿಗೆ ಸಂಸ್ಥೆಯ ಶಿಸ್ತು, ಸಂಯಮ ಹಾಗೂ ಶುಚಿತ್ವವನ್ನು ಕಾಪಾಡುವುದರ ಸಲುವಾಗಿ ಸ್ವಚ್ಛ ವಿದ್ಯಾಲಯ ಸಮಿತಿಯ ಅಧ್ಯಕ್ಷರಾಗಿ ತಮೀಮ್ ಆಯ್ಕೆಯಾದರು.
ಶಿಸ್ತು ಸಮಿತಿ: ಸಂಸ್ಥೆಯು ಅಪಾರ ಪ್ರಾಮುಖ್ಯತೆ ನೀಡುತ್ತಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಠ್ಯ-ಪಠ್ಯೇತರರ ಜೊತೆಗೆ ಶಿಸ್ತು ಮೂಡಿಸಿ ಪರಿಪೂರ್ಣ ದೈನಂದಿನ ತರಗತಿಗಳ ವ್ಯವಸ್ಥೆಯನ್ನು ಕಲ್ಪಿಸಿದೆ. ವಿದ್ಯಾರ್ಥಿಗಳಲ್ಲಿ ನಿಯಮಾನುಸಾರ ಶಿಸ್ತು ಮೂಡಿಸಲು ಸಮಿತಿಯು ರಚನೆಗೊಂಡಿದ್ದು, ಅಧ್ಯಕ್ಷರಾಗಿ ಅಭಿನಂದನ್ ರೈ ಕಾರ್ಯದರ್ಶಿಯಾಗಿ ವೈಷ್ಣವಿ ವಿ ಆರ್ ಆಯ್ಕೆಯಾದರು. ಹಾಗೂ ವಿವಿಧ ಸಂಘ-ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನು ಈ ಸಂದರ್ಭದಲ್ಲಿ ನೇಮಿಸಲಾಯಿತು.