Recent Posts

Tuesday, January 21, 2025
ಸುದ್ದಿ

ಬೀಳುವ ಸ್ಥಿತಿಯಲ್ಲಿದ್ದ ಮನೆಯೊಂದರ ರಿಪೇರಿ ಮಾಡಿ ಮಾನವೀಯತೆ ಮೆರೆದ ಕಲ್ಕಡ್ಕದ ಸಂಘಟನೆ – ಕಹಳೆ ನ್ಯೂಸ್

ಬಂಟ್ವಾಳ: ಈ ಪರಿಸರದಲ್ಲಿ ಕಷ್ಟದಲ್ಲಿರುವರನ್ನು ಹುಡುಕಿ ಅವರ ಸಹಾಯ ಮಾಡಲು ಈ ಸಂಘಟನೆಗಳು ಯಾವಾಗಲೂ ಮುಂದು. ಗೋಳ್ತಮಜಲು ಗ್ರಾಮದ ಗಣೇಶಕೋಡಿ ವಿಮಲಕ್ಕ ಎಂಬವರ ಮನೆಯ ಮಾಡು ಮುರಿದು ಹೋಗಿ ಹಂಚುಗಳು ಬಿದ್ದು ಹೋಗುವ ಪರಿಸ್ಥಿತಿಯಲ್ಲಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮನೆಯ ಆಧಾರಸ್ತಂಭವಾಗಿದ್ದ ಯಜಮಾನರನ್ನು ಕಳೆದುಕೊಂಡಿರುವ ವಿಮಲಕ್ಕ ಗಣೇಶ್ ಕೋಡಿ ಇವರ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವ ಇವರ ಮನೆ ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಮನೆ ರಿಪೇರಿ ಅಸಾಧ್ಯ ಪರಿಸ್ಥಿತಿಯಲ್ಲಿ ಇವರ ಕಷ್ಟಕರ ಜೀವನವನ್ನರಿತ ಶ್ರೀ ಗಣೇಶ್ ಗೆಳೆಯರ ಬಳಗ ಗೋಳ್ತಮಜಲು ತಂಡದ ಸದಸ್ಯರ ಮುಂದಾಳತ್ವದಲ್ಲಿ, ಸ್ವಸ್ತಿಕ್ ಫ್ರೆಂಡ್ಸ್ ಅಂಕದಡ್ಕ ಇವರ ಸಹಭಾಗಿತ್ವದಲ್ಲಿ, ಮಾತ್ರಶ್ರೀ ಗೆಳೆಯರ ಬಳಗ ವೀರಕಂಭ ಹಾಗೂ ಸ್ಥಳೀಯ ನಾಗರೀಕರ ಸಹಕಾರದೊಂದಿಗೆ ಮನೆಯ ಛಾವಣಿಯ ಕೆಲಸ ಪೂರ್ಣಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 60 ಸಾವಿರ ರೂ ವೆಚ್ಚದಲ್ಲಿ ಸಂಪೂರ್ಣ ಮೇಲ್ಚಾವಣಿಯ ಕೆಲಸ ವನ್ನು ಈ ಸಂಘಟನೆಗಳು ಹಾಗೂ ಊರಿನ ದಾನಿಗಳ ನೆರವಿನಿಂದ ಮಾಡಲಾಗಿದೆ. ಸಂಘಟನೆಗಳ ಯುವಕರು ಶ್ರಮದಾನದ ಮೂಲಕವೇ ಹೆಚ್ಚಿನ ಕೆಲಸ ಮುಗಿಸಿದರೆ, ಕೆಲವೊಂದು ಕೆಲಸಗಳಿಗೆ ಮಾತ್ರ ಹೊರಗಿನ ಜನರನ್ನು ಸಂಬಳ ನೀಡಿ ಕರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಡ ಜನರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಇವರ ಪ್ರಮುಖ ಧ್ಯೇಯವಾಗಿದೆ.