Tuesday, January 21, 2025
ಸುದ್ದಿ

ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ರಸ್ತೆಗಳ ಉಳಿಸಲು ವಿಶೇಷ ಅಭಿಯಾನಕ್ಕೆ ಕರೆ ಕೊಟ್ಟ ಶಾಸಕ ಹರೀಶ್ ಪೂಂಜಾ – ಕಹಳೆ ನ್ಯೂಸ್

ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ರಸ್ತೆಗಳ ಉಳಿಸಲು ವಿಶೇಷ ಅಭಿಯಾನಕ್ಕೆ ಶಾಸಕ ಹರೀಶ್ ಪೂಂಜಾ ಕರೆ ಕೊಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಜೆಸಿಬಿ ಓನರ್ಸ್ ಅಸೋಸಿಯೇಷನ್ ಮೀಟಿಂಗ್ ಕರೆದು ಎಲ್ಲ ಜೆಸಿಬಿ ಮಾಲಕರು ಒಂದು ದಿನ ಉಚಿತವಾಗಿ ರಸ್ತೆ ಚರಂಡಿಗಳ ದುರಸ್ತಿಯ ಕೆಲಸ ಮಾಡಿಸುವ ಮೂಲಕ ನಮ್ಮ ರಸ್ತೆಗಳನ್ನು ಉಳಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿದ್ದ ಎಲ್ಲಾ ಜೆಸಿಬಿ ಮಾಲಕರು ಶಾಸಕರ ಮನವಿಯನ್ನು ಒಪ್ಪಿಕೊಂಡು ಒಂದು ದಿನ ತಾಲೂಕಿನಾದ್ಯಂತ ಉಚಿತವಾಗಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು