Wednesday, January 22, 2025
ಸುದ್ದಿ

ಕವಲುದಾರಿ ಬಳಿಕ ಸಕಲಕಲಾವಲ್ಲಭನಾಗಲು ಹೊರಟ ರಿಷಿ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನ ಭರವಸೆಯ ನಟರ ಪೈಕಿ ರಿಷಿ ಮುಂಚೂಣಿಯಲ್ಲಿದ್ದಾರೆ. ‘ಕವಲುದಾರಿ’ ಚಿತ್ರದ ಸಕ್ಸಸ್‍ನ ಖುಷಿಯಲ್ಲಿ ನಟ ರಿಷಿ ಮತ್ತೊಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರಕ್ಕೆ ಸದ್ಯ ಟೈಟಲ್ ಫಿಕ್ಸ್ ಆಗಿದೆ. ಹೌದು, ರಿಷಿ ಅಭಿನಯದ ಹೊಸ ಚಿತ್ರಕ್ಕೆ ‘ಸಕಲಕಲಾವಲ್ಲಭ’ ಎಂದು ನಾಮಕರಣ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಸಕಲಕಲಾವಲ್ಲಭ’ನಿಗೆ ಜಾಕೋಬ್ ವರ್ಗೀಸ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ‘ಪೃಥ್ವಿ’, ‘ಚಂಬಲ್’ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರು ವರ್ಗೀಸ್ ಸೈಲೆಂಟ್ ಆಗಿ ‘ಸಕಲಕಲಾವಲ್ಲಭ’ ಚಿತ್ರ ಮಾಡಿ ಮುಗಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಇರುವ ಚಿತ್ರತಂಡ ಸಧ್ಯದಲ್ಲೇ ಪೋಸ್ಟರ್ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ. ಇನ್ನು ಚಿತ್ರದಲ್ಲಿ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಿಷಿಗೆ ನಾಯಕಿಯಾಗಿ ಮಲಯಾಳಿ ಬೆಡಗಿ ರಿಬಾ ಮೋನಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಸ್ಟಾರ್ ನಟ ನಿವೀನ್ ಪೌಲಿ ಜೊತೆ ನಾಯಕಿಯಾಗಿ ಮಿಂಚಿರುವ ರಿಬಾ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ಚಿತ್ರದ ರಿಲೀಸ್ ಪ್ಲಾನ್ ಮಾಡುತ್ತಿದೆ. ಎಲ್ಲವು ಅಂದು ಕೊಂಡಂತೆ ಆದ್ರೆ ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ರಿಷಿ ಸಕಲಕಲಾವಲ್ಲಭ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಚಿತ್ರಾಭಿಮಾನಿಗಳ ಕುತೂಹಲ.