Wednesday, January 22, 2025
ಸುದ್ದಿ

ಅತೀ ಶೀಘ್ರದಲ್ಲಿ ‘ಕಾಮಿಡಿ ಕಿಲಾಡಿಗಳು’ ಸೀಸನ್ 3 – ಕಹಳೆ ನ್ಯೂಸ್

ಜೀ ಕನ್ನಡ ವಾಹಿನಿಯ ಯಶಸ್ವೀ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು’ ಮತ್ತೆ ಬರುತ್ತಿದೆ. ಎರಡು ಸೀಸನ್ ಗಳ ಬಳಿಕ ಈಗ ವೀಕ್ಷಕರನ್ನು ನಗಿಸಲು ‘ಕಾಮಿಡಿ ಕಿಲಾಡಿಗಳು 3’ ರೆಡಿಯಾಗಿದೆ.

ಸದ್ಯಕ್ಕೆ, ಒಂದು ಸಣ್ಣ ಪ್ರೊಮೋ ಮೂಲಕ ಜೀ ಕನ್ನಡ ವಾಹಿನಿ ಕಾರ್ಯಕ್ರಮದ ಬರುವಿಕೆಯನ್ನು ತಿಳಿಸಿದೆ. ಹಳೆಯ ಸೀಸನ್ ನ ಪ್ರಮುಖ ಸ್ಪರ್ಧಿಗಳನ್ನು ಸೇರಿಸಿ ಈ ವಿಡಿಯೋ ಮಾಡಲಾಗಿದೆ. ಶೀಘ್ರದಲ್ಲೇ ಆಡಿಷನ್ ಶುರು ಆಗಲಿದ್ದು, ದಿನಾಂಕದ ಘೋಷಣೆ ಇನ್ನು ಆಗಿಲ್ಲ. ಈ ಬಾರಿಯೂ ಕಾರ್ಯಕ್ರಮದ ತೀರ್ಪುಗಾರರಾಗಿ ನಟ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟಿ ರಕ್ಷಿತಾ ಪ್ರೇಮ್ ಅವರೇ ಮುಂದುವರೆಯುವ ಸಾಧ್ಯತೆ ಇದೆ. ಮಾಸ್ಟರ್ ಆನಂದ್ ಅವರೇ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಮೊದಲ ಸೀಸಸ್ ಹಾಗೂ ಎರಡನೇ ಸೀಸನ್‍ಗಳಲ್ಲಿ ಇದ್ದ ಸ್ಪರ್ಧಿಗಳಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ. ಅನೇಕ ಸ್ಪರ್ಧಿಗಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ರೀತಿ ತಾವು ಕೂಡ ದೊಡ್ಡ ನಟರಾಗಬೇಕು ಎಂಬ ಕನಸು ಹೊಂದಿರುವ ಅನೇಕರು ಈ ಬಾರಿ ವೇದಿಕೆ ಏರಲಿದ್ದಾರೆ. ಈ ಬಾರಿಯ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮ ಯಾವಾಗ ಪ್ರಸಾರ ಆಗುತ್ತದೆ..? ಯಾವ ಯಾವ ಸ್ಪರ್ಧಿಗಳು ಇರುತ್ತಾರೆ..? ಎನ್ನುವ ವಿಚಾರ ಸದ್ಯದಲ್ಲಿಯೇ ತಿಳಿಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು