ಮಂಗಳೂರು : ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು, ರಾಜ್ಯಕ್ಕೂ ಇಂದು ಮುಂಗಾರು ಪ್ರವೇಶಿಸಲಿದೆ. ಇದರಿಂದ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿಯಲ್ಲಿ ವಾತಾವರಣ ಪ್ರಕ್ಷುಬ್ದವಾಗಿದೆ.
ಕರಾವಳಿಯ ಕಡಲ ತೀರಗಳಲ್ಲಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಎಲ್ಲಾ ಕಡಲ ತೀರಗಳಲ್ಲಿಯೂ ಕೂಡ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಉಳ್ಳಾಲ, ಉಚ್ಚಿಲ, ಪಣಂಬೂರು, ತಣ್ಣೀರುಬಾವಿ ಪ್ರದೇಶಗಳಲ್ಲಿ ಕಡಲ್ಕೊರೆತ ಆರಂಭವಾಗಿದೆ. ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.
ವಾಯುಭಾರ ಕುಸಿತದಿಂದ ರಭಸವಾಗಿ ಗಾಳಿಯೂ ಬೀಸುತ್ತಿದ್ದು, ಮೀನುಗಾರರು ಮತ್ತು ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.