Tuesday, January 21, 2025
ಸುದ್ದಿ

ಮತ್ತೆ ಐತಿಹಾಸಿಕ ಚಿತ್ರದಲ್ಲಿ ಮಿಂಚಲಿದ್ದಾರೆ ಮೆಗಾ ಸ್ಟಾರ್ ಮಮ್ಮುಟ್ಟಿ – ಕಹಳೆ ನ್ಯೂಸ್

ಮೆಗಾ ಸ್ಟಾರ್ ಮಮ್ಮುಟ್ಟಿ ಅಭಿನಯದ ಮಾಲಿವುಡ್ ಮಂದಿ ಅತೀವ ಕಾತರದಿಂದ ಕಾಯುತ್ತಿರುವ ಚಿತ್ರವೆಂದರೆ ಅದು ‘ಮಾಮಾಂಗಮ್’.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊನೆಯದಾಗಿ ಬಿಡುಗಡೆಗೊಂಡ ಮಮ್ಮುಟ್ಟಿ ಸಿನೆಮಾ ‘ಮಧರುರರಾಜ’ ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಇದೀಗ ಐತಿಹಾಸಿಕ ಚಿತ್ರ ಹಾಗೂ ಮಲ್ಟಿ ಸ್ಟಾರರ್ ‘ಮಾಮಾಂಗಮ್’ ಒಂದು ಪೋಸ್ಟರ್ ಹಾಗೂ ಕೆಲವು ಸ್ಟಿಲ್‍ಗಳ ಮೂಲಕ ನಿರೀಕ್ಷೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಮಾಮಾಂಗಮ್’ ಚಿತ್ರದಲ್ಲಿ ಮಮ್ಮುಟ್ಟಿ ಜೊತೆಗೆ ಯುವ ಸ್ಟಾರ್ ನಟ ಉಣ್ಣಿ ಮುಕುಂದ್ ಕೂಡ ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ. ನಾಯಕಿಯರಾಗಿ ಅನು ಸಿತಾರ, ಪ್ರಾಚಿ ತೆಹ್ಲಾನ್ ಅಭಿನಯಿಸಿದ್ದಾರೆ.

ಸಂಜೀವ ಪಿಳ್ಳೈ ಕಥೆ-ಚಿತ್ರಕಥೆಗೆ ಜೋಸೆಪ್ ಖ್ಯಾತಿಯ ಎಂ.ಪದ್ಮಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಎಂ.ಜಯಚಂದ್ರನ್ ಸಂಗೀತ, ಮನೋಜ್ ಪಿಳ್ಳೈ ಛಾಯಾಗ್ರಹಣ ಮತ್ತು ರಾಜಾ ಮೊಹಮ್ಮದ್ ಅವರ ಸಂಕಲನ ಈ ಚಿತ್ರಕ್ಕಿದೆ.

ವಿಶೇಷವೆಂದರೆ ಈ ಚಿತ್ರದ ಚಿತ್ರೀಕರಣ ಮಂಗಳೂರಿನ ಆಸು ಪಾಸಿನಲ್ಲಿ ಕೂಡ ಆಗಿದೆ. ಮತ್ತು ಇದೊಂದು ಐತಿಹಾಸಿಕ ಚಿತ್ರವಾಗಿ ಮೇಲ್ನೋಟಕ್ಕೆ ಕಾಣುತ್ತಿದ್ದರೂ, ಕೆಲವು ಲೀಕ್ ಆದ ಫೊಟೋಗಳಲ್ಲಿ ಮಮ್ಮುಟ್ಟಿ ಹಾಗು ಉಣ್ಣಿ ಮುಕುಂದ್ ಈಗಿನ ಕಾಲದ ವಸ್ತ್ರ ಧರಿಸಿ ಬುಲೆಟ್ ಬೈಕ್‍ಗೆ ಒರಗಿ ನಿಂತ ಫೋಸ್‍ಗಳಿವೆ ಹಾಗಾಗಿ ಇದು ಕೇವಲ ಐತಿಹಾಸಿಕ ಚಿತ್ರ ಎಂದು ಹೇಳಲು ಸಾಧ್ಯವಿಲ್ಲ.