Sunday, January 19, 2025
ಸಿನಿಮಾ

ಸಕತ್ ನಿರೀಕ್ಷೆ ಮೂಡಿಸಿರುವ ‘ಪಮ್ಮಣ್ಣ ದಿ ಗ್ರೇಟ್’ – ಸಿನಿ ಕಹಳೆ

 

ಸಿನಿ ಕಹಳೆ : ಯಾವ ಚಿತ್ರರಂಗಕ್ಕೂ ಕಮ್ಮಿಯಿಲ್ಲದೆ ಸಾಲು ಸಾಲು ಉತ್ತಮ ಚಿತ್ರಗಳನ್ನು ತುಳುಚಿತ್ರರಂಗ ನೀಡುತ್ತಿದೆ. ವಿಶೇಷ ಎಂದರೆ ಈ ವರೆಗೆ ಬಿಡುಗಡೆಯಾದ ಚಿತ್ರಗಳನ್ನು ತುಳುವರು ಎಂದೂ ಕೈಬಿಡಲಿಲ್ಲ ಎಲ್ಲವೂ ಯಶಸ್ವಿಯಾಗಿ ಪೂರೈಸಿದೆ.ಅಂತೆಯೇ ಮತ್ತೊಂದು ವಿಭಿನ್ನ ಚಿತ್ರ ತುಳುವರ ಮನಸ್ಸು ಗೆಲ್ಲಲು ಸಜ್ಜಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಕುಡ್ಲ ಸಿನಿಮಾಸ್ ಬ್ಯಾನರ್‍ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ‘ಪಮ್ಮಣ್ಣ ದಿ ಗ್ರೇಟ್’.ನವೆಂಬರ್ 27 ರಂದು ಪದವಿನಂಗಡಿ ಕೊರಗಜ್ಜನ ಕಟ್ಟೆಯಲ್ಲಿ ಬೆಳಿಗ್ಗೆ 8.30 ಕ್ಕೆ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಬಣ್ಣ ಬಣ್ಣದ ಬದುಕು ಚಿತ್ರದ ನಿರ್ದೆಶಕರಾಗಿರುವ ಇಸ್ಮಾಯಿಲ್ ಮೂಡುಶೆಡ್ಡೆಯವರ ರಚನೆ ಮತ್ತು ನಿರ್ದೆಶನದಲ್ಲಿ ಈ ಚಿತ್ರ ಮೂಡಿಬರಲಿದೆ.ಆರ್.ಕೆ ಮಂಗಳೂರು ಛಾಯಾಗ್ರಾಹಕರಾಗಿ ಸಹಕರಿಸಿದ್ದರೆ,ಚಂದ್ರಕಾಂತ್ ಶೆಟ್ಟಿಯವರ ಸಂಗೀತದ ಮೆರುಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಚಿತ್ರದ ಪ್ರಮುಖ ಆಕರ್ಷಣೆ ಎಂದು ಹೇಳಬಹುದಾದ ಹಿಂದಿನ ‘ಪಗೆತ ಪುಗೆ’ ಎಂಬ ಚಿತ್ರದ ಜನರ ಮೆಚ್ಚುಗೆಗೆ ಪಾತ್ರವಾದ ಮೋಕೆದ ಸಿಂಗಾರಿ ಎಂಬ ಹಾಡನ್ನು ಈಗಿನ ಟ್ರೆಂಡ್‍ಗೆ ಅನುಗುಣವಾಗಿ ಹಿರಿಯ ಸಾಹಿತಿಗಳಾದ ಸೀತಾರಾಮ್ ಕುಲಾಲ್ ರವರು ಬರೆದಿದ್ದಾರೆ.

ಈ ಚಿತ್ರಕ್ಕೆ ಉತ್ತಮ ತಾರಾ ಬಳಗವಿದ್ದು ಪೃಥ್ವಿ ಅಂಬರ್ ನಾಯಕ ನಟನಾದರೆ ಇವರಿಗೆ ಜೋಡಿಯಾಗಿ ಶಿಲ್ಪಾ ಸುವರ್ಣ ನಟಿಸಲಿದ್ದಾರೆ.ಹಾಗು ತುಳುನಾಡಿನ ಹೆಸರಾಂತ ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಈ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಲಿದ್ದಾರೆ.ಹಾಗೂ ಕನ್ನಡ ಚಿತ್ರರಂಗದ ಖಳನಟ ರಮೇಶ್ ಪಂಡಿತ್,ದೀಪಕ್ ರೈ,ಪ್ರಕಾಶ್ ತೂಮಿನಾಡು, ಸತೀಶ್ ಬಂದಲೆ,ಮಿಮಿಕ್ರಿ ಶರಣ್, ರಿಷಾ ಮಣಿಪಾಲ್, ಮಾಸ್ಟರ್ ಧನ್ವಿತ್ ಸುವರ್ಣ,ಪ್ರಾಣ್ ಶೆಟ್ಟಿ,ವಿಜಯ್ ಮಯ್ಯ,ಮುಂತಾದ ಹಾಸ್ಯನಟರು ಸಹ ನಟಿಸಲಿದ್ದಾರೆ.

Leave a Response